ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ ದೇಹಾಂತೇ ತವ ಸಾನ್ನಿಧ್ಯಂ ದೇಹಿ ಮೇ ಪರಮೇಶ್ವರ..!
ಹೇ ಭಗವಂತ ನಾನು ಯಾರ ಮುಂದೆ ಕೈ ವಡ್ಡದಂತೆ ನನ್ನ ಜೀವನ ನಡಿಯಲಿ, ಸುನಾಯಸವಾಗಿ ನನ್ನ ಮರಣ ಬರಲಿ, ಮರಣದ ನಂತರ ಭಗವಂತನ ನಿನ್ನ ಚರಣಗಳಲ್ಲಿ ನಾನು ಸೇರಲಿ, ಇಷ್ಟನ್ನೇ ಅನುಗ್ರಹಿಸು ಭಗವಂತ ಎಂಬುವ ಪ್ರಾರ್ಥನೆ,
ಕೆಲವರ ಜೀವನ ಬಡತನದಲ್ಲಿ ಬಹಳ ಕಷ್ಟಗಳಲ್ಲಿ ಯಾಚನೆ ಮಾಡುತ್ತಾ ಆರ್ಥಿಕ ತೊಂದರೆಗಳಲ್ಲಿ ಕಳಿಯಬೇಕಾಗುತ್ತದೆ, ನಂತರ
ಬಹಳ ದಿನ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮಲಗಿ, ನಾನಾ ರೋಗಗಳಿಂದ ಮೂಗು ಬಾಯಿಗಳಲ್ಲಿ ಕೊಳವೆ ಹಾಕಿಸಿಕೊಂಡು, ಡಯಾಲಿಸಿಸ್ ಅನೇಕ ಆಪರೇಷನ್ ಗಳು ಮಾಡಿಸಿಕೊಂಡು ಹಾಸಿಗೆಯಲ್ಲಿ ಮಲಮೂತ್ರ ವಿಸರ್ಜನ ಮಾಡುತ್ತಾ, ಅನೇಕ ಶಾರೀರಿಕ ವೇದನೆ ಅನುಭವಿಸುತ್ತಾ ಮನೆಯವರಿಗೂ ಬೇಸರವಾಗಿ ಬಹಳ ಒದ್ದಾಡಿ ಸಾಯುತ್ತಾರೆ.
ಇಂತಹ ಕಷ್ಟಗಳನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಮೇಲಿನ ಶ್ಲೋಕ ಮಾಡಿರಬಹುದು.
ಆದರೆ ನಮ್ಮ ಈ ಪ್ರಾರ್ಥನೆಯಿಂದ ಭಗವಂತ ತಪ್ಪದೇ ಅಂತಹ ಒಳ್ಳೆ ಮರಣ ನಮಗೆ ಕೊಡುತ್ತಾನೆ ಎಂದು ಯಾರಿಗೂ ಹೇಳಲಿಕ್ಕಾಗದು.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣಪರಮಾತ್ಮ ಗಹನೂ ಗತಿಹಿ ಈ ಸಂಸಾರದ ಬ್ರಹ್ಮಾಂಡದ ವಿಷಯ ಬಹಳ ಗಹನ ವಾದದ್ದು ತಿಳಿದುಕೊಳ್ಳಲು ಬಹಳ ಕಷ್ಟ ಎಂದಿದ್ದಾರೆ, ಅಸಾಧ್ಯ ಎಂದರು ತಪ್ಪಾಗಲಿಕಿಲ್ಲ.
ಶರಣರ ಗುಣ ಮರಣದಲ್ಲಿ. ಎಂದು ಹೇಳುತ್ತಾರೆ, ತೆಲುಗುನಲ್ಲಿ ಹೇಳುತ್ತಾರೆ మంచి వానికి మరణమే సాక్షి, ಅಂದರೆ ಒಳ್ಳೆಯ ಜನರಿಗೆ ಆತನ ಮರಣವೇ ಸಾಕ್ಷಿ ಎಂಬುವ ಅರ್ಥ, ಇಂತಹ ಶುಭಾಷಿತಗಳು ಎಲ್ಲ ಸಮಯಕ್ಕೆ ಎಲ್ಲರಿಗೂ ಹೊಂದಿಸಿ ನೋಡಬಾರದು. ಇವುಗಳು ಮನಸ್ಸಿನ ಸಮಾಧಾನಕ್ಕೆ ಮಾತ್ರ ಹೇಳಿದ್ದಾರೆ.
ಶ್ರೀ ರಾಮಕೃಷ್ಣ ಪರಮಹಂಸರಿಗೆ ಗಂಟಲು ಕ್ಯಾನ್ಸರ್ ಆಗಿತ್ತು, ಅವರಿಗೆ ಹೇಳಿದರು ನೀವು ದೇವಿ ಜೊತೆ ಮಾತಾಡುತ್ತೀರಿ ಆ ಮಹಾತಾಯಿಗೆ ಹೇಳಿ ನಿಮ್ಮ ಕ್ಯಾನ್ಸರ್ ಕಡಿಮೆ ಮಾಡಿಕೊಳ್ಳಿ ಎಂದು, ಆಗ ರಾಮಕೃಷ್ಣ ಪರಮಹಂಸರು ಹೇಳುತ್ತಾರೆ ಇಂತಹ ಕ್ಷುಲ್ಲುಕ ಆರೋಗ್ಯ ವಿಷಯಗಳನ್ನು ತಾಯಿಯ, ದೇವಿಯ ಮುಂದೆ ಹೇಳಬಾರದು, ಇದು ನನ್ನ ಪೂರ್ವ ಜನ್ಮದ ಕರ್ಮಫಲ ಇದನ್ನು ಶರೀರ ಅನುಭವಿಸಲೇಬೇಕು, ಈಗ ತಪ್ಪಿಸಿಕೊಂಡರೆ ಮತ್ತೆ ಮುಂದೆ ಅನುಭವಿಸಬೇಕಾಗುತ್ತದೆ ಎಂದರಂತೆ.
ಶ್ರೀ ರಮಣ ಮಹರ್ಷಿಗಳಿಗೆ ತೊಡೆಗೆ ಕ್ಯಾನ್ಸರ್ ಆಗಿತ್ತು ಅವರನ್ನು ಕೇಳಿದಾಗ ನನಗೇನು ಆಗಿಲ್ಲ ಈ ಶರೀರಕ್ಕೆ ಆಗಿದೆ ನಾನು ಆರಾಮಾಗಿದ್ದೇನೆ ಎಂದೇ ಹೇಳುತ್ತಿದ್ದರಂತೆ.
ಸ್ವಾಮಿ ವಿವೇಕಾನಂದರು ಹೃದಯಾಘಾತದಿಂದ ಚಿಕ್ಕ ವಯಸ್ಸಿನಲ್ಲಿ ತೀರಿದರೆಂದು ಹೇಳುತ್ತಾರೆ.
ಜಗದ್ಗುರು ಶ್ರೀ ಶಂಕರ ಭಗವತ್ಪಾದರಿಗೆ ಭಗಂದರ ಎಂಬ ಭಯಾನಕ ರೋಗವಿತ್ತಂತೆ, ಶಿಷ್ಯರಿಗೆ ಪಾಠ ಹೇಳಲು ಕುಳಿತರೆ, ಗುದದ್ವಾರ ದಿಂದ ಅವರ ಪಂಚೆ ರಕ್ತದಿಂದ ತೂಯುತ್ತಿತ್ತಂತೆ, ಬಹಳ ಚಿಕ್ಕ ವಯಸ್ಸಿನಲ್ಲಿ ದೇಹ ತ್ಯಾಗ ಅವತಾರ ಸಮಾಪ್ತಿ ಮಾಡಿದರು, ಕರ್ಮಫಲವೆಂದು ಅವರು ಕೂಡ ಅನುಭವಿಸಿದರು.
ಅಂತಹ ಮಹಾನುಭಾವರು, ಅವತಾರಿ ಪುರುಷರು ಪುಣ್ಯಾತ್ಮರಿಗೂ ಈ ಕರ್ಮಫಲ ಬಿಟ್ಟಿಲ್ಲ ಎಂದ ಮೇಲೆ ನಮ್ಮ ಗತಿ ನಮ್ಮ ಸಾವು ಹೇಗೆ ಬರುತ್ತದೆಯೋ ಆ ಭಗವಂತನಿಗೆ ಗೊತ್ತು.
ಶ್ರೀ ಅರವಿಂದರು ಹೇಳುತ್ತಿದ್ದರು ಮನುಷ್ಯನಿಗೆ ಮರಣ ತಪ್ಪಿದ್ದಲ್ಲ, ಆದರೆ ನಾವು ಮರಣ ಭಯವನ್ನು ತಪ್ಪಿಸಿಕೊಳ್ಳಬೇಕು, ಇದು ಧ್ಯಾನ ,ಅಧ್ಯಾತ್ಮ ,ವೇದಾಂತ ಚಿಂತನೆ ದಿಂದ ಸಾಧ್ಯ ಎನ್ನುತ್ತಿದ್ದರು.
ಮೇಲಿನ ಶ್ಲೋಕ ಪ್ರತಿ ಮನುಷ್ಯ ಪ್ರತಿನಿತ್ಯ ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು ಹಾಗೂ ಇದನ್ನು ಪ್ರಾರ್ಥಿಸುತ್ತಾ ಇರಬೇಕು.
ಹಾಗೂ ನಾವು ಇದುವರೆಗೆ ನಡೆದು ಬಂದ ದಾರಿ ನಮ್ಮ ಜೀವನ ಶೈಲಿ, ನಾವು ಮಾಡುತ್ತಿರುವ ಕೆಲಸ ಸರಿಯಾದುದ್ದ, ಕೇವಲ ಹಣ ಗಳಿಕೆ ಹಣ ಕೂಡಿಡುವುದು, ಕೇವಲ ನಾನು ನನ್ನ ಹೆಂಡರು ನನ್ನ ಮಕ್ಕಳು ಇದೇ ಜೀವನದ ಗುರಿಯಾಗಬಾರದು, ಹಣಕ್ಕೆ ಮೂರು ಗತಿ ಎಂದು ಹೇಳುತ್ತಾರೆ ಉತ್ತಮವಾದದ್ದು ದಾನ, ಮಧ್ಯಮವಾದದ್ದು ಭೋಗ ನೀನು ಅನುಭವಿಸು, ಇವೆರಡು ಮಾಡದೆ ಇದ್ದರೆ ನಿನ್ನ ಹಣಕ್ಕೆ ನಾಶ ತಪ್ಪಿದ್ದಲ್ಲ ಕಟ್ಟಿಟ್ಟ ಬುತ್ತಿ.
ಈ ಕ್ಷಣ ನಮ್ಮ ಜೀವನ ಹೇಗೆ ಕಳೆಯುತ್ತದೆಯೋ,? ಮರುಕ್ಷಣ ಏನಾಗುತ್ತದೆಯೋ?
ಇಂತಹ ಆತಂಕ ಭಯ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ.
60 ವಯಸ್ಸು ದಾಟಿದ ಜನರಿ ಗಂತು ಒಂದು ರೀತಿ ಮಾನಸಿಕ ಆತಂಕ ಭಯ ಕಾಡುತ್ತಾ ಇರುತ್ತದೆ.
ಮಕ್ಕಳು ಹೊರಗೆ ಹೋದರೆ ತಿರುಗಿ ಮನೆಗೆ ಬರುವವರೆಗೆ ತಂದೆ ತಾಯಂದಿರಿಗೆ ಒಂದು ರೀತಿಯ ಆಂದೋಲನ ಮಾನಸಿಕ ಚಿಂತೆ ಗಾಬರಿ ಸರ್ವೇಸಾಮಾನ್ಯ ಇದು ಎಲ್ಲರನ್ನೂ ಕಾಡುತ್ತಾ ಇರುತ್ತದೆ.
ನಮ್ಮ ಹಣೆ ಬರಹದಲ್ಲಿ ಭಗವಂತ ಏನು ಬರೆದಿದ್ದಾನೋ ಮರುಕ್ಷಣ ಏನಾಗುವ ದಿದಿಯೋ, ನಮ್ಮ ಸಾವು ಹೇಗೆ ಬರುತ್ತದೆಯೋ ಎಂದು ಚಿಂತೆ ಆತಂಕ ಬಹಳ ಜನರನ್ನು ಕಾಡುತ್ತಾ ಇರುತ್ತದೆ, ಕೆಲವರು ಸುಮ್ಮನೆ ನಾನು ಏನು ಚಿಂತೆ ಮಾಡುವುದಿಲ್ಲ ನಿರ್ಭಯವಾಗಿದ್ದೇನೆ, ನನಗೆ ಯಾವ ಭಯ ಇಲ್ಲ ಎಂದು ಜನರ ಮುಂದೆ ಸುಳ್ಳು ಪ್ರದರ್ಶನ ಮಾಡುತ್ತಾ ಇರುತ್ತಾರೆ. ಒಳಗೊಳಗೆ ಅವರು ಭಯ ಬೀಳುತ್ತಾ ಇರುತ್ತಾರೆ, ಅಂತಹ ಉನ್ನತ ಮನಸ್ಥಿತಿಗೆ ಇವರು ಮುಟ್ಟಿರುವುದಿಲ್ಲ .
ನಮ್ಮ ಶಾಸ್ತ್ರಗಳು ಹೇಳುತ್ತವೆ ಮುಂದೆನು ಆಗುತ್ತದೆ ಎಂದು ಚಿಂತಿಸಬೇಡಿ, ಹಿಂದೆ ಏನಾಯಿತು ಮರೆತುಬಿಡಿ, ಪ್ರತಿದಿನ ಪ್ರತಿನಿತ್ಯ ಪ್ರತಿಕ್ಷಣ ನಿಮ್ಮ ಕರ್ತವ್ಯವನ್ನು ಹಾಗೂ ಭಗವಂತ ನಿಮಗೆ ಒಪ್ಪಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಇರಿ, ಜೀವನದಲ್ಲಿ ಸತ್ಯ ಮತ್ತು ಪ್ರಾಮಾಣಿಕತೆ, ಕರ್ತವ್ಯ ಪ್ರಜ್ಞೆ ಈ ಮೂರು ಬಹಳ ಅವಶ್ಯಕ, ಈ ಮೂರನ್ನು ಮಾಡುತ್ತಾ ಇದ್ದವರು ವಿಶೇಷ ಪೂಜೆ ಪುನಸ್ಕಾರ ತೀರ್ಥಯಾತ್ರೆ ದೇವಾಲಯಗಳಿಗೆ ಹೋಗುವುದು ಮಡಿ, ಉಪವಾಸ ಮಾಡದಿದ್ದರೂ ಭಗವಂತ ಇವರನ್ನು ಆಶೀರ್ವದಿಸುತ್ತಾನೆ. ಪ್ರಾಮಾಣಿಕತೆ, ಕರ್ತವ್ಯ ಭಾವ, ಸತ್ಯ ನಡತೆ ಇಲ್ಲದ ಮನುಷ್ಯ ಎಷ್ಟು ಪೂಜೆ, ಪುರಸ್ಕಾರ ,ಜಪ ,ಹೋಮ, ಸಂಧ್ಯಾ ,ಮಡಿ, ಉಪವಾಸ, ಚಾತುರ ಮಾಸ ಏನು ಮಾಡಿದರೂ ಭಗವಂತ ಫಲ ಕೊಡುವುದಿಲ್ಲ ಇದು ನೆನಪಿಡಬೇಕು. ಮೇಲೆ ಹೇಳಿದ ಮೂರು ಗುಣಗಳೇ ಧರ್ಮದ ಭೂನಾದಿ,ಇದೇ ಧರ್ಮ.
ಹಿಂದಿ ಹಳೆಯು ಕೆಲ ಚಲನಚಿತ್ರ ಗೀತೆಗಳ ಅರ್ಥ ವೇದಾಂತದಿಂದ ಕೂಡಿದೆ.
जिंदगी का सफर यह कैसा है सफर। कोई समझा नहीं कोई जाना नहीं। चलते हैं सब मगर।।
ಅಂದರೆ ಈ ಜೀವನದ ಯಾತ್ರೆ ಎಂತಹ ಯಾತ್ರೆ ಯಾರಿಗೂ ತಿಳಿಯದು, ಯಾರೂ ತಿಳಿದುಕೊಂಡಿಲ್ಲ, ಆದರೆ ಎಲ್ಲರೂ ಜೀವನ ಎಂಬ ದಾರಿಯಲ್ಲಿ ನಡೆಯುತ್ತಿದ್ದಾರೆ.
यह जीवन है इस जीवन का यही है रंग रूप। थोड़े गम है थोड़ी खुशियां। यह न सोचो इसमें अपनी हार है की जीत है। जो भी मिले उसे अपना लो यही जीवन का रीत है।।
ಅಂದರೆ ಈ ಜೀವನ ಇದರ ರೀತಿ ರಿವಾಜ ಬಣ್ಣ ರೂಪ. ಹೀಗೆ ಇರುತ್ತದೆ, ಒಮ್ಮೊಮ್ಮೆ ಸ್ವಲ್ಪ ದುಃಖ ಬರುತ್ತದೆ, ಒಮ್ಮೊಮ್ಮೆ ಸ್ವಲ್ಪ ಸುಖ ಸಂತೋಷ ಸಿಗುತ್ತದೆ, ಜೀವನದಲ್ಲಿ ನಾನು ಸೋತೆ, ನಾನು ಗೆದ್ದೆ ಎಂದು ಆಲೋಚಿಸಬೇಡಿ, ಏನು ನಿಮ್ಮ ಭಾಗ್ಯದಲ್ಲಿ ಬಂದಿದಿಯೋ ಅದನ್ನೇ ಸ್ವೀಕಾರ ಮಾಡಿ ಇದೆ ಜೀವನ.
ಇದನ್ನೇ ನಮ್ಮ ದಾಸರು ಪದ್ಯಗಳಲ್ಲಿ ಹೇಳುತ್ತಾರೆ
ಇಟ್ಟ ಹಾಗೆ ಇರುವೆನು ಹರಿಯೇ, ಬಂದಿದ್ದೆಲ್ಲ ಬರಲಿ ಭಗವಂತನ ದಯೆ ಒಂದಿರಲಿ, जब जब जो जो होना है तब तब सो सो होता ही है। ಯಾವಾಗ ಏನು ಆಗಬೇಕು ಅದು ಆಗುತ್ತಾ ಇರುತ್ತದ. ಮನಸ್ಸಿನ ಸಮಾಧಾನಕ್ಕೆ ಮನಸ್ಸಿಗೆ ಧೈರ್ಯ ಬರಲಿಕ್ಕೆ ಕಾಲ್ಪನಿಕ ಕೆಲ ಕಥೆಗಳನ್ನು ಜ್ಞಾನಿಗಳು ತಿಳಿದವರು ಹೇಳುತ್ತಾ ಇರುತ್ತಾರೆ, ಕೆಲವರಿಗೆ ಮುಪ್ಪಿನ ವಯಸ್ಸಿನಲ್ಲಿ ಇದ್ದ ಒಬ್ಬನೇ ಮಗ ತೀರಿಕೊಳ್ಳುತ್ತಾನೆ, ಚಿಕ್ಕ ಮಕ್ಕಳಿಗೆ ತಾಯಿ ತೀರಿಕೊಳ್ಳುತ್ತಾಳೆ ಎಕ್ಸಿಡೆಂಟ್ ಅನಾಹುತಗಳು ಆಗಿ ಕೆಲವರ ಸಂಸಾರವೇ ಅಸ್ತವ್ಯಸ್ತ ಆಗಿಬಿಡುತ್ತದೆ,ಅಂತಹ ಕುಟುಂಬದವರು ಏನು ತಪ್ಪು ಮಾಡಿದವರಲ್ಲ ಬಹಳ ಸಾತ್ವಿಕ ಪ್ರಾಮಾಣಿಕ ಪರೂಪಕಾರಿ ಒಳ್ಳೆಯ ವ್ಯಕ್ತಿ ಗಳು ಆಗಿರುತ್ತಾರೆ, ಅಂಥವರಿಗೆ ಹೀಗೆ ಏಕೆ ಆಯಿತು ಎಂದು ಕೇಳಿದರೆ ಹೋದ ಜನುಮದ ಕರ್ಮ ಫಲ ಎಂದು ಹೇಳಿ ಪಂಡಿತರು ದಾಟಿ ಕೊಳ್ಳುತ್ತಾರೆ, ನಾವು ಮರು ಪ್ರಶ್ನೆ ಮಾಡುವ ಹಾಗಿರುವುದಿಲ್ಲ, ಇಂದಿನ ದಿನಗಳಲ್ಲಿ ಇರುವ ಎಲ್ಲರಿಗೂ ಈ ಬ್ರಹ್ಮಾಂಡದ ರಹಸ್ಯ ಯಾರಿಗೂ ತಿಳಿದಿಲ್ಲ, ಅಮೆರಿಕಾದ ನಾಸಾ ಹೇಳುವ ಪ್ರಕಾರ ಇಂತಹ ಕನಿಷ್ಠ50,000 ಬ್ರಹ್ಮಾಂಡಗಳು ಇವೆಯಂತೆ, ಅದಕ್ಕಾಗಿ ನಮ್ಮ ಶಾಸ್ತ್ರಗಳಲ್ಲಿ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಎಂದು ಹೇಳಿದ್ದಾರೆ,
ನಾವು ಆ ಅಗೋಚರ ದೈವಿಶಕ್ತಿಯನ್ನು ಪ್ರಾರ್ಥಿಸುತ್ತಾ ಜೀವನ ಕಳಿಯೋಣ ಇದೊಂದೇ ಮಾರ್ಗ ಇದೇ ಜೀವನ.
ನಾವು ಕೇವಲ ಭಗವಂತನನ್ನು ಪ್ರಾರ್ಥನೆ ಮಾಡಬಲ್ಲೆವು, ಎಲ್ಲಾ ಆತನ ಕೈಯಲ್ಲಿದೆ, ನಾವು ಒಳ್ಳೆಯ ಕರ್ಮಗಳನ್ನು ಮಾಡುತ್ತಾ ನಾಲ್ಕು ಜನರಿಗೆ ಉಪಕಾರಿಯಾಗಿ ನಗುನಗುತ್ತಾ ಬಾಳಬಹುದು ಇದು ನಮ್ಮ ಕೈಯಲ್ಲಿದೆ, ಬನ್ನಿ ಅದನ್ನೇ ಮಾಡೋಣ.
ಭಾರತ್ ಮಾತಾ ಕೀ ಜಯ್
ಸನಾತನ ಹಿಂದೂ ಧರ್ಮಕ್ಕೆ ಜೈ
ಅಮರ ದೀಕ್ಷಿತ ಕೃಷ್ಣ
9448757587