ಗಾಯತ್ರಿ ಮಂತ್ರದ ಮಹಿಮೆ..!
ಸಾಯಂ ಪ್ರಾತಶ್ಚ ಸಂಧ್ಯಾಂ ಯೋ ಬ್ರಾಹ್ಮಣೋಭ್ಯುಪಸೇವತೇ | ಪ್ರಜಪನ್ ಪಾವನೀಂ ದೇವೀಂ ಗಾಯತ್ರೀಂ ವೇದಮಾತರಮ್ || ಸ ತಯಾ ಪಾವಿತೋ ದೇವ್ಯಾ ಬ್ರಾಹ್ಮಣೋ ನಷ್ಟ ಕಿಲ್ಬಿಷಃ |
ನ ಸೀದೇತ್ ಪ್ರತಿಗೃಹ್ಯಾನೋ ಮಹೀಮಪಿ ಸಸಾಗರಮ್ ||
ಯಾವ ಬ್ರಾಹ್ಮಣನು ವೇದಮಾತೆಯಾದ, ಪವಿತ್ರವಾದ ಗಾಯತ್ರೀ ಮಂತ್ರವನ್ನು ಜಪಿಸುತ್ತಾ ಸಾಯಂ-ಪ್ರಾತಃ ಸಂಧ್ಯಾವಂದನೆಯನ್ನು ಉಪಾಸಿಸುತ್ತಾನೋ ಅವನು ಆ ಗಾಯತ್ರೀ ಮಾತೆಯಿಂದ ಪವಿತ್ರನಾಗಿ, ಪಾಪರಹಿತನಾಗಿ ಸಮುದ್ರದಿಂದ ಸಹಿತವಾದ ಸಮಸ್ತಭೂಮಿಯನ್ನು ದಾನ ಪಡೆದರೂ ಸಂಕಷ್ಟಕ್ಕೊಳಗಾಗುವುದಿಲ್ಲ.
ಯೇ ಚಾಸ್ಯ ದಾರುಣಾಃ ಕೇಚಿತ್ ಗ್ರಹಾಃ ಸೂರ್ಯಾದಯೋ ದಿವಿ |
ತೇ ಚಾಸ್ಯ ಸೌಮ್ಯಾ ಜಾಯಂತೇ ಶಿವಾಃ ಶಿವತರಾಃ ಸದಾ ||
ಆಕಾಶದಲ್ಲಿ ಸೂರ್ಯನೇ ಮೊದಲಾದ ಕೆಲವು ಗ್ರಹಗಳು ಅವನ ಪಾಲಿಗೆ ಭಯಂಕರರಾಗಬೇಕಿದ್ದರೂ ಗಾಯಮಂತ್ರಜಪದ ಪ್ರಭಾವದಿಂದ ಸೌಮ್ಯವಾಗುತ್ತಾರೆ. ಯಾವತ್ತೂ ಅತ್ಯಂತ ಶುಭಫಲವನ್ನೇ ನೀಡುವವರಾಗುತ್ತಾರೆ.
ನಾಧ್ಯಾಪನಾದ್ ಯಾಜನಾದ್ ವಾ ಅನ್ಯಸ್ಮಾತ್ ವಾ ಪ್ರತಿಗ್ರಹಾತ್ | ದೋಷೋ ಭವತಿ ವಿಪ್ರಾಣಾಂ ಜ್ವಲಿತಾಗ್ನಿಸಮಾ ದ್ವಿಜಾಃ ||
ಗಾಯತ್ರೀಮಂತ್ರವನ್ನು ಕಾಲಕಾಲಕ್ಕೆ ಜಪಿಸುವವನಿಗೆ ಅಧ್ಯಾಪನ, ಯಾಜನ ಅಥವಾ ಬೇರೆಯವರಿಂದ ದಾನ ತೆಗೆದುಕೊಳ್ಳುವುದರಿಂದ ಯಾವ ದೋಷವೂ ಬರುವುದಿಲ್ಲ. ಅಂತಹ ಬ್ರಾಹ್ಮಣರು ಜ್ವಲಿಸುವ ಅಗ್ನಿಗೆ ಸಮಾನರು.
…..ವ್ಯಾಸ ವಾಣಿ