ಜೈ ಜೈ ಜೈ ಹನುಮಾ
ಜಯ ಜಯ ಜಯ ಹನುಮಾ
ಎದೆಯ ಗೂಡಲಿಟ್ಟು ರಾಮನ ಭಜಿಸಿದ
ಸುಂದರ ಬಲಭೀಮ ಜಯ ಜಯ
ಜೈ ಜೈ ಜೈ ಜೈ ಜೈ ಹನುಮಾ
ಜಯ ಜಯ ಜಯ ಜಯ ಜಯ ಹನುಮಾ |ಪ|
ವೀರಮಾರುತಿ ಗಂಭೀರ ಮಾರುತಿ
ಮಾರುತಿರಾಯಂ,ವಾನರವೀರಂ
ಶ್ರೀರಾಮ ಧೂತಂ ಶ್ರೀರಾಮ ದಾಸಂ |೧|
ಎಲ್ಲೇಲ್ಲಿ ನೋಡಿದರೂ ಅಲ್ಲಲ್ಲಿ ನೀನಿರುವೆ
ರಕ್ಕಸರ ಸೊಕ್ಕ ಮುರಿದಿಕ್ಕಿ ಲಂಕೆಗೆ ಹಾರಿ
ಇಕ್ಕಿ ಓಡಾಡಿದೆಯೊ ,ಕಿಚ್ಚಿಕ್ಕಿ ಓಡಾಡಿದಯೊ|೨|
ಶ್ರೀರಾಮನಧಾ೯ಂಗಿಗೇ
ಉಂಗುರ ವಿತ್ತೇ ನೀನು
ವನಭಂಗಗೈದೆಯಲ್ಲೊ, ಮಾರುತಿರಾಯ
ದಾಸ ಶ್ರೇಷ್ಠನಾದೆ,ಶ್ರೀರಾಮನ
ದಾಸ ಶ್ರೇಷ್ಠನಾದೆ|೩|