ಲೋಕ ಭರಿತನೋ ರಂಗಾ ಅನೇಕ ಚರಿತನೊ – ಉಡುಪಿ ಕೃಷ್ಣ

ಲೋಕ ಭರಿತನೋ ರಂಗಾ ಅನೇಕ ಚರಿತನೊ ||ಲೋಕ|| ಕಾಕು ಜನರ ತರಿದು ತನ್ನ ಏಕಾಂತ ಭಕ್ತರ ಪೊರೆವ ಕೃಷ್ಣ ||ಕಾಕು|| ‌‌ ‌ ||ಲೋಕ||

ರಾಜಸೂಯ ಯಾಗದಲ್ಲಿ ರಾಜರಾಜರಿರಲು ವಸುದೇವಸುತನು ಈತನೆ ಸಭಾಪೂಜ್ಯ ಎನಿಸಿದಾತ. ||ಲೋಕ||

ಮಿಕ್ಕ ನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆ ||ಮಿಕ್ಕ||ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ ||ಲೋಕ||

ಉತ್ತರೆಯ ಗರ್ಭದಲ್ಲಿ ಸುತ್ತುಮುತ್ತು ಅಸ್ತ್ರವಿರಲು|| ಉತ್ತರೆ||ಮತ್ತೆ ಚಕ್ರದಿಂದ ಒತ್ತಿ ಪರೀಕ್ಷಿತನ ಪೊರೆದವನಾತ ||ಲೋಕ||

ತನ್ನ ಸೇವಕಜನರ ಪೊರೆದ ||೨||ಉನ್ನತ ಉಡುಪಿಯಲ್ಲಿ ನಿಂತು ಘನ್ನ ಮಹಿಮೆಯಿಂದ ಮೆರೆವ ಪ್ರಸನ್ನ ಹಯವದನನ ಶ್ರೀಕೃಷ್ಣ ||ಲೋಕ||

Leave a Reply

Your email address will not be published. Required fields are marked *

Translate »