ನೋಡಿದೇ ನಾ ನೋಡಿದೆ ನೋಡಿದೆನೊ ಗುರು ವ್ಯಾಸರಾಯರ|

ನೋಡಿದೇ ನಾ ನೋಡಿದೆ || ಪ ||

ನೋಡಿದೆನೊ ಗುರು ವ್ಯಾಸರಾಯರ|
ನೋಡಿದೆನೊ ಶುಭಕಾಯರಾ|
ಮಾಡಿದೆ ಶಿರಬಾಗಿ ನಮನವ
ಬೇಡಿದರ್ಥವ ಕೊಡುವ ವಡೆಯರ || ಅ.ಪ ||

ಭಿದುರ ಮಯವಾದ ವೇದಿ ಕಾಗ್ರದಿ|
ಚದುರ ದಿಕ್ಕಿಲಿ ಶೋಭಿಸುವ ಶುಭ|
ತ್ರಿದಿಶ ವರ ಮುಖ ದಿವಿಜ ರೈವರು|
ಮುದದಿ ಇರುತಿಹ ರಿವರ ಮಧ್ಯದಿ
ಪದುಮನಾಭನ ಚತುರ ರೂಪವ|
ಹೃದಯ ಮಂದಿರದಲ್ಲಿ ಭಜಿಸುವ|
ಪದುಮನಾಭನ ಪ್ರೀತಿ ಪಾತ್ರರ
ಸದ ಮಲಾ ಗುರು ವ್ಯಾಸರಾಯರ || 1 ||

ಶ್ರೀನಿವಾಸನು ಶಿರಸಿ ನೊಳಗಿಹ|
ಆನ ನಾಗ್ರದಿ ಬಾದರಾಯಣ|
ಜ್ಞಾನಮಯ ಶಿರಿ ಹಂಸ ಅಚ್ಯುತ|
ಮೌನಿ ಕಪಿಲಾನಂತ ಭಾರ್ಗವ|
ಮಾನನಿಧಿ ಹಯಗ್ರೀವ ಹಂಸನು|
ದಾನವಾಂತಕ ರಾಮಚಂದ್ರ ಸದಾನುರಾಗದಿ ತೆನೆಗಳಲ್ಲಿ|
ಭಾನುನಂದದಿ ಪೊಳೆವ ಬಗೆಯನು || 2 ||

ಮಧ್ಯ ಭಾಗದಿ ಕೃಷ್ಣ ದೇವನು|
ಇದ್ದು ಇವರನು ಸೇವೆ ಮಾಳ್ಪರ|
ಶುದ್ಧ ಮಾಡವರರ್ಥ ಸರ್ವದ|
ಶಿದ್ಧಿಮಾಡಿ ಇವರನತಿ ಪ್ರ
ಶಿದ್ಧ ಮಾಡಿವರಲ್ಲಿ| ಪ್ರತ್ಯಕ್ಷ
ಸಿದ್ಧ ನಾಗಿರುತಿಹನು ನಮ್ಮ ಗುರು|
ಮಧ್ವ ಗುರು ಜಗನ್ನಾಥವಿಠಲನ|
ಮಧ್ಯ ಹೃದಯದಿ ಭಜಿಪ ಗುರುಗಳ||
✍️ಕೌತಾಳಂ ಶ್ರೀ ಗುರು ಜಗನ್ನಾಥ ದಾಸರ ರಚನೆ.
🙏ಶಯನ ಕಾಲೇ ಶ್ರೀ ಪದ್ಮನಾಭಾಯ ನಮಃ🙏

Leave a Reply

Your email address will not be published. Required fields are marked *

Translate »