ಸಾಲದಿಂದ ಆದಷ್ಟು ಬೇಗ ಮುಕ್ತಿ ಪಡೆಯಲು ಈ ಸ್ತೋತ್ರವನ್ನು ಪಠಿಸಿ
ಹೆಚ್ಚಿನವರು ಸಾಲದ ಬಾಧೆಯಿಂದ ಬೇಸತ್ತು ಹೋಗಿರುತ್ತಾರೆ. ಸಾಲ ಪಡೆದವರಿಗೆಲ್ಲರಿಗೂ ಕೂಡ ಆದಷ್ಟು ಬೇಗ ಆ ಸಾಲ ತೀರಿಸಿಕೊಳ್ಳುವುದೇ ದೊಡ್ಡ ಕನಸಾಗಿರುತ್ತದೆ. ಸಾಲದಿಂದ ಮುಕ್ತಿಹೊಂದಿದರೆ ಸಾಕೆನಿಸಿರುತ್ತದೆ.
ಈ ಮಂತ್ರವನ್ನು ಪಠಿಸಿದರೆ ಸಾಲದ ಬಾಧೆಯು ನಿವಾರಣೆಯಾಗುತ್ತದೆ.
ಋಣಮೋಚನ ಮಂಗಳ ಸ್ತೋತ್ರವನ್ನು ಭಗವಾನ್ ಶ್ರೀ ಹನುಮಾನ್ ನಿಗೆ ಅರ್ಪಿಸಲಾಗಿದೆ. ಜೀವನದಲ್ಲಿ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗದೇ ಸಾಲವನ್ನು ಮಾಡಿಕೊಂಡವರು ಸಾಲ ಆದಷ್ಟು ಬೇಗ ತೀರಿಸುವಂತಾಗಲು ಈ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಬೇಕು. ಈ ಸ್ತೋತ್ರ ಪಠಿಸಿದರೆ ಸಾಲದ ಭಾದೆಯು ಕಡಿಮೆಯಾಗುತ್ತದೆ. ಋಣ ಬಾಧೆಯನ್ನು ತಪ್ಪಿಸಲು ಇದು ಅತ್ಯಂತ ಸುಲಭ ಮತ್ತು ಸರಳ ಪರಿಹಾರ.
ಶ್ರೀ ಋಣಮೋಚನ ಮಂಗಳ ಸ್ತೋತ್ರ
ಶ್ರೀ ಋಣಮೋಚನ ಮಂಗಳ ಸ್ತೋತ್ರವನ್ನು ಪ್ರತಿದಿನವು ತಪ್ಪದೇ ಪಠಿಸಿದರೆ ನಮ್ಮೆಲ್ಲಾ ಆರ್ಥಿಕ ಸಮಸ್ಯೆಗಳು ಮತ್ತು ತೊಂದರೆಗಳು ನಿವಾರಣೆಯಾಗುತ್ತದೆ. ಯಾರಾದರು ಈ ಸ್ತೋತ್ರವನ್ನು ಪಠಿಸಬೇಕೆಂದರೆ ಇದರ ಆರಂಭವು ಮಂಗಳವಾರದಿಂದಲೇ ಆರಂಭವಾಗಬೇಕು. ಅಂದರೆ ಮೊದಲನೆ ದಿನ ಸ್ತೋತ್ರವನ್ನು ಮಂಗಳವಾರದಂದು ಪಾರಾಯಣ ಮಾಡಿ. ಒಂದು ವೇಳೆ ಈ ಸ್ತೋತ್ರವನ್ನು ಪ್ರತಿದಿನ ಕನಿಷ್ಠ ಪಕ್ಷ ಒಂದು ಬಾರಿ ಹಾಗೂ ಪ್ರತೀ ಮಂಗಳವಾರ ಒಂಬತ್ತು ಸಾರಿ ಪಠಣ ಮಾಡಬೇಕು.
ಋಣಮೋಚನ ಮಂಗಳ ಸ್ತೋತ್ರದ ಮಹತ್ವ
ಇನ್ನು ಯಾವುದೇ ಕಾರಣಗಳಿಲ್ಲದೆಯೂ ಕೂಡ ನೀವು ಈ ಸ್ತೋತ್ರವನ್ನು ಪಠಿಸಬಹುದು. ಪ್ರತಿದಿನ ಪಠಿಸಲು ಇಚ್ಛಿಸುವವರು ಶುಕ್ಲ ಪಕ್ಷದ ಮೊದಲ ಮಂಗಳವಾರದಿಂದಲೇ ಆರಂಭಿಸಿದರೆ ಒಳ್ಳೆಯದು. ಪ್ರತಿದಿನ ಸ್ನಾನದ ನಂತರ ದೇವರನ್ನು ಪ್ರಾರ್ಥಿಸಿ ಈ ಸ್ತೋತ್ರವನ್ನು ಪಠಿಸಲು ಕುಳಿತುಕೊಳ್ಳಿ. ಇಲ್ಲಿದೆ ನೋಡಿ ಋಣಮೋಚನ ಮಂಗಳ ಸ್ತೋತ್ರ:
ಮಂಗಳೋ ಭೂಮಿಪುತ್ರಶ್ಚ ಋಣಹರ್ತಾ ಧನಪ್ರದಃ |
ಸ್ಥಿರಾಸನೋ ಮಹಾಕಾಯಃ ಸರ್ವಕರ್ಮಾವಿರೋಧಕಃ ೧
ಲೋಹಿತೋ ಲೋಹಿತಾಕ್ಷಶ್ಚ ಸಾಮಾಗಾನಂ ಕೃಪಾಕರಃ |
ಧರಾತ್ಮಜ ಕುಜೋಭೌಮೋ ಭೂತಿದೋ ಭೂಮಿನಂದನಃ ೨
ಅಂಗಾರಕೋ ಯಮಶ್ಚೈವ ಸರ್ವರೋಗಾಪಹಾರಕಃ |
ವೃಷ್ಟೇಃ ಕರ್ತಾಪಹರ್ತಾ ಚ ಸರ್ವಕಾಮಫಲಪ್ರದಃ ೩
ಏತಾನಿ ಕುಜ ನಾಮಾನಿ ನಿತ್ಯಂ ಯಃ ಶ್ರದ್ಧಯಾ ಪಠೇತ್ |
ಋಣಂ ನಾ ಜಾಯತೇ ತಸ್ಯ ಧನಂ ಶೀಘ್ರಮವಾಪ್ನುಯಾತ್ ೪
ಧರಣಿಗರ್ಭ ಸಂಭೂತಂ ವಿದ್ಯುತ್ ಕಾಂತಿ ಸಮಪ್ರಭಂ |
ಕುಮಾರಂ ಶಕ್ತಿಹಸ್ತಂ ತಂ ಮಂಗಳಂ ಪ್ರಣಮಾಮ್ಯಹಂ ೫
ಸ್ತೋತ್ರಂ ಅಂಗಾರಕಸ್ಯ ಏತತ್ ಪಠನೀಯಮ್ ಸದಾನೃಭಿಃ |
ನ ತೇಷಾಂ ಭೌಮಾಜಾ ಪೀಡಾ ಸ್ವಲ್ಪಾಪಿ ಭವತಿ ಕ್ವಚ್ಚಿತ್ ೬
ಅಂಗಾರಕ ಮಹಾಭಾಗ ಭಗವಾನ್ ಭಕ್ತವತ್ಸಲಂ |
ತ್ವಂ ನಮಾಮಿ ಮಮಾಶೇಷಂ ಋಣಮಾಶು ವಿನಾಶಯಃ ೭
ಋಣ ರೋಗಾದಿ ದಾರಿದ್ರ್ಯಂ ಯೇ ಚಾನ್ಯೇಹ್ಯ ಅಪಮೃತ್ಯುವಃ |
ಭಯಕ್ಲೇಶ ಮನಸ್ತಾಪಾಃ ನಶ್ಯಂತು ಮಮ ಸರ್ವದಾ ೮
ಅತಿವಕ್ರ ದುರಾರಾಧ್ಯ ಭೋಗಮುಕ್ತ ಜಿತಾತ್ಮನಃ |
ತುಷ್ಟೋ ದದಾಸಿ ಸಾಮ್ರಾಜ್ಯಂ ಋಷ್ಟೋ ಹರಸು ತತ್ ಕ್ಷಣಾತ್ ೯
ವಿರಂಚಿ ಶಕ್ರ ವಿಷ್ಣೂನಾಂ ಮನುಷ್ಯಾಣಾಂ ತು ಕಾ ಕಥಾ |
ತೇನ ತ್ವಂ ಸರ್ವ ಸತ್ವೇನ ಗ್ರಹರಾಜೋ ಮಹಾಬಲಃ ೧೦
ಪುತ್ರಾನ್ ದೇಹಿ ಧನಂ ದೇಹಿ ತ್ವಾಮಸ್ಮಿ ಶರಣಂ ಗತಃ |
ಋಣ ದಾರಿದ್ರ್ಯ ದುಃಖೇನ ಶತ್ರೂಣಾಂ ಚ ಭಯಾತ್ತತಃ ೧೧ ಏಭಿರ್ ದ್ವಾದಶಭಿಃ ಶ್ಲೋಕೈರ್ಯ ಸ್ತೌತಿ ಚ ಧರಾಸುತಮ್ |
ಮಹತೀಮ್ ಶ್ರಿಯಮವಾಪ್ನೋತಿ ಇಹ್ಯಪರೋ ಧನದೋಯುವಾ ೧೨
ಈ ಸ್ತೋತ್ರ ವನ್ನು ಪ್ರತಿನಿತ್ಯ ಪರಿಶುದ್ಧರಾಗಿ ಭಕ್ತಿ ಶ್ರದ್ಧೆಗಳಿಂದ ಪಠಿಸಿ. ಇದರಿಂದ ನಿಮ್ಮ, ನಿಮ್ಮ ಕುಟುಂಬದ ಸದಸ್ಯರ ಆರ್ಥಿಕ ಸಮಸ್ಯೆಗಳು ದೂರಾಗಿ ಆಂಜನೇಯನ ಅನುಗ್ರಹದಿಂದ ಮನೆಯಲ್ಲಿ ಮಹಾಲಕ್ಷ್ಮಿಯು ನೆಲೆಯಾಗಿ, ಸಾಲ ಬಾಧೆಯು ನಿವಾರಣೆಯಾಗುತ್ತದೆ.
ಸೂಚನೆ :
ಪ್ರತಿ ಮಂಗಳವಾರ ಪಾರಾಯಣ ಮಾಡಿದ ನಂತರ ತೊಗರಿ (ಕನಿಷ್ಠ 1/4 ಕಿಲೋ) ಮತ್ತು ಕಲ್ಲುಪ್ಪು ಇವುಗಳನ್ನು ದಕ್ಷಿಣೆ ಸಮೇತರಾಗಿ ಸುಬ್ರಹ್ಮಣ್ಯ ಸ್ವಾಮಿ, ಹನುಮಂತ ದೇವರು ದೇವಾಲಯದಲ್ಲಿ ಅಥವಾ ಸತ್ಪಾತ್ರರಿಗೆ ದಾನ ಮಾಡಿ, ಆಶೀರ್ವಾದ ಪಡೆಯಬೇಕು.