ಋಗ್ವೇದೀಯ ಸ್ಮಾರ್ತ ಸಂಧ್ಯಾವಂದನೆ…!
(ಪ್ರಾತಃ ಸಂಧ್ಯಾ ಮಾಡುವ ವೇಳೆ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತು ಕೊಳ್ಳಬೇಕು.ಸಾಯಂ ಸಂಧ್ಯಾ ವೇಳೆ ಪಶ್ಚಿಮಾಭಿಮುಖವಾಗಿ ಕುಳಿತು ಕೊಳ್ಳಬೇಕು. ಮತ್ತಾವ ವಿಚಾರ ಅಥವಾ ಮಾತು ಆಡ ಬಾರದು ಹಾಗೂ ಮನಸ್ಸಿನಲ್ಲಿಯೂ ತರ ಬಾರದು. ಆಚಮನದ ವೇಳೆ ಮೊದಲನೆಯ ಮೂರು ನಾಮಗಳನ್ನು ಉಚ್ಛರಿಸಿ ಉದಕ ಪ್ರಾಶನ ಮಾಡ ಬೇಕು (ನೀರು ಕುಡಿಯ ಬೇಕು). ನಾಲ್ಕನೆಯ ನಾಮ ಉಚ್ಛರಿಸಿ ಬೆರಳುಗಳನ್ನು ತೊಳೆದು ಮುಂದಿನ ನಾಮಗಳನ್ನು ಕ್ರಮವಾಗಿ ಉಚ್ಛರಿಸಬೇಕು)
ಅಪವಿತ್ರ ಪವಿತ್ರೋವಾಃ ಸರ್ವಾವಸ್ಥಂಗತೋಪಿವಾ|
ಯಃ ಸ್ಮರೇತ್ ಪುಂಡರೀಕಾಕ್ಷಃ ಸಃ ಬಾಹ್ಯಾಭ್ಯಂತರಃ ಶುಚಿಃ ||
- #ಆಚಮನಮ್
೧. ಓ ಕೇಶವಾಯ ಸ್ವಾಹಾ
೨. ಓಂ ನಾರಾಯಣಾಯ ಸ್ವಾಹಾ
೩. ಓಂ ಮಾಧವಾಯ ಸ್ವಾಹಾ
೪.. ಓಂ ಗೋವಿಂದಾಯ ನಮಃ
೫. ಓಂ ವಿಷ್ಣವೆ ನಮಃ
೬. ಓಂ ಮಧುಸೂದನಾಯ ನಮಃ
೭. ಓಂ ತ್ರಿವಿಕ್ರಮಾಯ ನಮಃ
೮. ಓಂ ವಾಮನಾಯ ನಮಃ
೯. ಓಂ ಶ್ರೀಧರಾಯ ನಮಃ
೧೦. ಓಂ ಹೃಷಿಕೇಶಾಯ ನಮಃ
೧೧. ಓಂ ಪದ್ಮಾಭಾಯ ನಮಃ
೧೨. ಓಂ ದಾಮೋದರಾಯ ನಮಃ
೧೩. ಓಂ ಸಂಕರ್ಷಣಾಯ ನಮಃ
೧೪. ಓಂ ವಾಸುದೇವಾಯ ನಮಃ
೧೫. ಓಂ ಪ್ರದ್ಯುಮ್ನಾಯ ನಮಃ
೧೬. ಓಂ ಅನಿರುದ್ಧಾಯ ನಮಃ
೧೭. ಓಂ ಪುರುಷೋತ್ತಮಾಯ ನಮಃ
೧೮. ಓಂ ಅಧೋಕ್ಷಜಾಯ ನಮಃ
೧೯. ಓಂ ನಾರಸಿಂಹಾಯ ನಮಃ
೨೦. ಓಂ ಅಚ್ಯುತಾಯ ನಮಃ
೨೧. ಓಂ ಜನಾರ್ಧನಾಯ ನಮಃ
೨೨. ಓಂ ಉಪೇಂದ್ರಾಯ ನಮಃ
೨೩. ಓಂ ಹರಯೆ ನಮಃ
೨೪. ಓಂ ಶ್ರೀ ಕೃಷ್ಣಾಯ ನಮಃ
- #ಪ್ರಾಣಯಾಮಃ
ಪ್ರಣವಸ್ಯ ಪರಬ್ರಹ್ಮ ಋಷಿಃ ಪರಮಾತ್ಮಾ ದೇವತಾ ದೈವಿಃ ಗಾಯತ್ರಿ ಛಂದಃ ಪ್ರಾಣಯಾಮೆ ವಿನಿಯೋಗಃ |
( ಪ್ರಣವಸ್ಯನಾದ ಪರಬ್ರಹ್ಮ ಋಷಿ, ಪರಮಾತ್ಮನೆ, ದೇವತಾ ಮತ್ತು ಗಾಯತ್ರಿ ಛಂದವೆ ಪ್ರಾಣಯೋಗ ವಿನಿಯೋಗ ಮಾಡುತ್ತಿದ್ದೇನೆ)
ಓಂ ಭೂಃ, ಓಂ ಭುವಃ, ಓಂ ಸ್ವಂ, ಓಂ ಮಹಃ, ಓಂ ಜನಃ, ಓಂ ತಪಂ, ಓಂ ಸತ್ಯಮ್
(ಭೂಃ, ಭುವಃ ಮುಂತಾದುವುಗಳಿಗೆ “ವ್ಯಾಹೃತಿ” ಎನ್ನುವರು. ಇವು ಏಳು ವ್ಯಾಹೃತಿ ಏಳು ಲೋಕಗಳ ಹೆಸರು. “ಸಪ್ತಾನಾಂ ವ್ಯಾಹೃತಿನಾಂ” ಎಂಬುದಾಗಿ ಹೇಳಿದ್ದಾರೆ)
ಓಂ ತತ್ ಸವಿತುರ್ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿಃ |
ಧಿಯೋಯೋನಃ ಪ್ರಚೋದಯಾತ್ ||
(ಇದು ಗಾಯತ್ರಿ ಮಂತ್ರ. ಸಂಧ್ಯೆಗೆ ಮುಖ್ಯವಾದ ಮಂತ್ರ. ಇದರ ಅರ್ಥವನ್ನು ಮುಂದೆ “ಜಪ” ತಲೆ ಬರಹದಲ್ಲಿ ವಿವರಿಸಲಾಗಿದೆ)
ಓಂ ಆಪೋ ಜ್ಯೋತಿಃ ರಸೋsಮೃತು
ಬ್ರಹ್ಮ ಭೂರ್ಭುವಃ ಸ್ವರೋಮ್ ||
(ಆಪೋ ಜ್ಯೋತಿಃ. ಇದು ಗಾಯತ್ರಿ ಶಿರವು. ಉದಕ, ಸೂರ್ಯಾದಿ ಜ್ಯೋತಿ, ಮಧುರಾದಿ ರಸ, ದೇವತೆಗಳಿಗೆ ಅನ್ನವೆನಿಸುವ ಅಮೃತ. ವೇದ ಭೂರಾದಿ ಲೋಕಗಳೆಲ್ಲ ಪರಬ್ರಹ್ಮ ಸ್ವರೂಪವು.
ಓಂ ಕಾರ, ಸಪ್ತ ವ್ಯಾಹೃತಿ, ಗಾಯತ್ರಿ ಮತ್ತು ಗಾಯತ್ರಿ ಶಿರ ಕಲೆತು ಪ್ರಾಣಾಯಾಮ ಮಂತ್ರವಾಗುವದು).
ಟಿಪ್ಪಣಿ: ಪ್ರಾಣಾಯಾಮ (ಪ್ರಾಣ ಆಯಾಮ): ಪ್ರಾಣ ವಾಯುವಿನ ನಿರೋಧ ಮಾಡುವದು. ಪೂರಕ, ಕುಂಭಕ ಮತ್ತು ರೇಚಕ ಈ ಮೂರು ಕಲೆತು ಪ್ರಾಣಾಯಾಮವಾಗುವದು.
ಪೂರಕ = ವಾಯು ಒಳಗೆ ತೆಗೆದುಕೊಳ್ಳುವದು.
ಕುಂಭಕ = ಒಳಗೆ ತೆಗೆದುಕೊಂಡ ವಾಯುವನ್ನು ಸ್ಥಿರಗೊಳಿಸುವದು.
ರೇಚಕ = ಸ್ಥಿರಗೊಳಿಸಿದ ವಾಯುವನ್ನು ಹೊರಗೆ ಬಿಡುವದು.
- #ಸಂಕಲ್ಪ
ಮಮ ಉಪಾತ್ತದರಿತು ಕ್ಷಯದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪ್ರಾತಃ ಸಂಧ್ಯಾ (ಸಾಯಂ ಸಂಧ್ಯಾ) ಉಪಾಸಯಿಷ್ಯೆಃ
(ಈ ವಾಕ್ಯಗಳನ್ನು ಅಂದು ಬಲ ಅಂಗೈಯಲ್ಲಿ ನೀರು ಹಾಕಿಕೊಂಡು ಕೆಳಗೆ ಬಿಡಬೇಕು. ಸಾಯಂ ಸಂಧ್ಯಾ ಮಾಡುವಾಗ ಸಾಯಂ ಸಂಧ್ಯಾ ಎನ್ನಬೇಕು).
- #ಮಾರ್ಜನಮ್
(ಮಾರ್ಜನವೆಂದರೆ ಶುದ್ಧಿ. ಶುದ್ಧಿಗೋಸ್ಕರ ಆಯಾ ಮಂತ್ರಗಳನ್ನು ಹೇಳಿಕೊಂಡು ಮಸ್ತಕದ ಮೇಲೆ ನೀರು ಪ್ರೋಕ್ಷಿಸಿಕೊಳ್ಳುವದು).
೧. ಓಂ ಆಪೊಃ ಹಿಷ್ಣಾಮಯೋ ಭುವಃ
ತಾನ ಊರ್ಜೆ ದಧಾತನಃ | ಮಹೇರಣಾಯ ಚಕ್ಷಸೆ
(ಎಲೈ ಉದಕಗಳೆ: ನೀವು ಸುಖ ಕೊಡುವವರಾಗಿರುವಿರಿ. ಅದರಿಂದ ನೀವು ಅನ್ನ ಮತ್ತು ಶೇಷ್ಠವಾದ ಹಾಗೂ ಉತ್ತಮವಾದ ಜ್ಞಾನವನ್ನು ಕೊಡುವವರಾಗಿರುವಿರಿ).
೨. ಓಂ ಯೋವ ಶಿವ ತಮೋ ರಸಃತಸ್ಯ ಭಾಜಯತೇನಃ | ಓಂ ಉಶತೀರವ ಮಾತರಃ
(ಮಕ್ಕಳ ಕಲ್ಯಾಣ ಇಚ್ಛಿಸುವ ತಾಯಿಯು ಹೇಗೆ ತನ್ನ ಸ್ತನದಲ್ಲಿರುವ ಹಾಲು ಕುಡಿಸುವಳೊ ನೀವು ಈ ಲೋಕದಲ್ಲಿ ನಿಮ್ಮ ಅತ್ಯಂತ ಕಲ್ಯಾಣಕರವಾದ ರಸವನ್ನು ನಮಗೆ ಕುಡಿಸುವರಾಗಿರುವಿರಿ).
೩. ಓಂ ತಸ್ಮಾ ಆರಂಗಮಾಮ ವಃ
ಯಸ್ಯಕ್ಷಯಾಯ ಜಿನ್ವಥ| ಆಪೊಃ ಜನಾಯಥಾಚನಃ ||
(ಎಲೈ ಉದಕಗಳೆ: ಅನ್ನ ಸಮೃದ್ಧಿಯಾಗುವದರ ಸಲುವಾಗಿ ನೀವು ವನಸ್ಪತಿಗಳ ಪೋಷಣೆ ಮಾಡುವಿರಿ. ಆದ್ದರಿಂದ ನಮಗೆ ವಿಪುಲವಾಲದ ಅನ್ನ ದೊರಯಬೇಕೆಂದು ನಿಮಗೆ ಶರಣು ಬಂದಿರುವೆವು. ನಮಗೆ ಬಲ ಮತ್ತು ಬಲಿಷ್ಠ ಪುತ್ರ ಪೌತ್ರಾದಿಗಳನ್ನು ಕೊಡುವವರಾಗಿರುವಿರಿ).
ಓಂ ಸೂರ್ಯಶ್ಚ (ಅಗ್ನಿಶ್ಚ) ಮಾಮನ್ಯುಶ್ಚ ಮನ್ಯುಪತಯಶ್ಚ ಮನ್ಯು ಕೃತ್ಯೇಭ್ಯಃ ಪಾಪೇಭ್ಯೋ ರಕ್ಷಂತಾಮ್ | ಯದನ್ಹಾ (ಯದ್ ರಾತ್ರ್ಯಾ) ಪಾಪಮಕಾರ್ಷಂ ಮನಸಾ ವಾಚಾ ಹಸ್ತಾಭ್ಯಾಂ ಪದ್ಭ್ಯಾಂ ಉದರೇಣ ಶಿಶ್ನಾ | ರಾತ್ರಿ (ಅಹಃ) ತದವಲುಂಪತು | ಯತ್ಕಿಂಚ ದುರಿತಂಮಯಿ | ಇದಮಹಂ ಮಾಮ್ ಅಮೃತಯೋನೌ ಸೂರ್ಯೆಃ (ಸತ್ಯೆಃ) ಜ್ಯೋತಿಷಿ ಜುಹೋಮಿ ಸ್ವಾಹಾಃ ||
(ಸೂರ್ಯ (ಅಗ್ನಿ) ಕ್ರೋಧಪತಿ ಎಂದರೆ ವಿವೇಕವು. ಇವು ಕ್ರೋಧ ಮೂಲಗಳಿಂದ ಒದಗುವ ಪಾಪಗಳಿಂದ ನಮ್ಮನ್ನು ರಕ್ಷಿಸಲಿ. ಮನ, ವಾಣಿ, ಹಸ್ತ, ಕಾಲು, ಉದರ, ಶಿಶ್ನ ಇವುಗಳ ಯೋಗದಿಂದ ರಾತ್ರಿಯಲ್ಲಿ (ದಿನದಲ್ಲಿ) ನಾನು ಏನೇನು ಪಾಪ ಮಾಡಿರುವೆನೊ ಅವುಗಳ ನಾಶವನ್ನು ರಾತ್ರಿ ದೇವತಾ (ಅಹರ್ ದೇವತಾ) ಮಾಡಲಿ. ಇದರ ಹೊರತು ಮತ್ತು ನನ್ನಲ್ಲಿ ಉಳಿದಿರುವ ಎಲ್ಲ ಪಾಪಗಳನ್ನು, ಆ ಪಾಪಗಳನ್ನು ಮಾಡಿರುವ ನಾನು ನನ್ನ ಹವನವನ್ನು ಮೋಕ್ಷಕ್ಕೆ ಕಾರಣರಾಗಿರುವ ಸೂರ್ಯ ರೂಪ (ಸತ್ಯ ರೂಪ) ತೇಜದಲ್ಲಿ ಬಿಡುವೆನು).
ಬಲಗೈಯಲ್ಲಿ ಉದಕ ತೆಗೆದುಕೊಂಡು ಮೇಲೆ ಹೇಳಿದ ಮಂತ್ರ ಪಠಿಸಿ ಉದಕ ಪ್ರಾಶನ ಮಾಡಬೇಕು. ಅನಂತರ ಕೇಶವಾದಿ (೨೪) ನಾಮಗಳನ್ನು ಉಚ್ಛರಿಸಬೇಕು. ಸಾಯಂ ಸಂಧ್ಯಾ ಕಾಲದಲ್ಲಿ ಕಂಸದಲ್ಲಿ ತೋರಿಸಿದಂತೆ ಪಠಿಸಬೇಕು.
- #ದ್ವಿತೀಯ_ಮಾರ್ಜನಮ್
೧. ಓಂ ಆಪೊಃ ಹಿಷ್ಣಾಮಯೋ ಭುವಃ
ತಾನ ಊರ್ಜೆ ದಧಾತನಃ | ಮಹೇರಣಾಯ ಚಕ್ಷಸೆ
(ಇದರ ಅರ್ಥವನ್ನು ಮೇಲೆ ವಿವರಿಸಲಾಗಿದೆ)
೨. ಓಂ ಯೋವ ಶಿವ ತಮೋ ರಸಃತಸ್ಯ ಭಾಜಯತೇನಃ | ಓಂ ಉಶತೀರವ ಮಾತರಃ
(ಇದರ ಅರ್ಥವನ್ನು ಮೇಲೆ ವಿವರಿಸಲಾಗಿದೆ)
೩. ಓಂ ತಸ್ಮಾ ಆರಂಗಮಾಮ ವಃ
ಯಸ್ಯಕ್ಷಯಾಯ ಜಿನ್ವಥ| ಆಪೊಃ ಜನಾಯಥಾಚನಃ ||
(ಇದರ ಅರ್ಥವನ್ನು ಮೇಲೆ ವಿವರಿಸಲಾಗಿದೆ)
೪. ಓಂ ಶಂನ್ನೋ ಧೇವೀರಭೀಷ್ಟಯ ಆಪೋಭವಂತು ಪೀತಯೆ | ಶಂಯೋ ರಭಿಸ್ರವಂತು ನಃ ||
(ದೈದೀಪ್ಯಮಾನ ಉದಕಗಳು ನಮಗೆ ಕಲ್ಯಾಣ ಪಾಲಿಸಲಿ. ನಮ್ಮ ಯಜ್ಞ ಕರ್ಮಗಳಿಗೆ ಸಾಧನಗಳಾಗಲಿ. ಪ್ರಾಶನಕ್ಕಾಗಿ ದೊರೆಯಲಿ ಮತ್ತು ರೋಗಗಳನ್ನು ಶಮನಗೈಯುವಂತಹ ಉದಕಗಳ ಪ್ರವಾಹವು ನಮ್ಮನ್ನು ರಕ್ಷಿಸಲಿ).
೫. ಓಂ ಈಶಾನಾ ವಾರ್ಯಾಣಾಂ ಕ್ಷಯಂತೀಶ್ಚರ್ಷಣೀನಾಮ್ | ಆಪೊಯಾಚಾಮಿ ಭೇಷಜಮ್ ||
(ವನಸ್ಪತಿಗಳನ್ನು ಸಮೃದ್ಧಗೊಳಿಸುವ ಮತ್ತು ಮನುಷ್ಯ ಮಾತ್ರರ ಯೋಗಕ್ಷೇಮ ನಡೆಸುವಂತಹ ಉದಕಗಳಲ್ಲಿ ನಾನು ಔಷಧಗಳನ್ನು ಯಾಚಿಸುವೆನು.).
೬. ಓಂ ಅಪ್ಸು ಮೆ ಸೋಮೋ ಅಬ್ರವೀದರ್ವಿಶ್ವಾನಿ ಭೇಷಜಾ | ಅಗ್ನಿಂಚ ವಿಶ್ವ ಶಂಭುವಮ್ ||
((ಸಿಂಧು ದ್ವೀಪ ಋಷಿ) ಸೋಮನು ನನಗೆ ಹೀಗೆ ಹೇಳಿರುವನು, “ಉದಕಗಳಲ್ಲಿ ಸಮಸ್ತ ಔಷಧಿಗಳಿವೆ ಮತ್ತು ಜಗತ್ತಿಗೆ ಸುಖ ಕೊಡುತಹ ಅಗ್ನಿಯೂ ಇರುವನು”.)).
೭. ಓಂ ಅಪಃ ಪ್ರಣೀತ ಭೇಷಜಂ ವರೂಥಂ ತನ್ವೇ ಮಮ | ಜ್ಯೋಕ್ ಚ ಸೂರ್ಯಂ ದೃಶೆ |
(ಎಲೈ ಉದಕಗಳಿರಾ, ನಮ್ಮ ಶರೀರಕ್ಕೆ ರೋಗ ನಿವಾರಕ ಔಷಧಗಳನ್ನು ಪೂರೈಸಿರಿ. ಅದರಿಂದ ನಾನು ಸೂರ್ಯನನ್ನು ಚಿರಕಾಲ ನೋಡುವಂತಾಗಲಿ. ಅಂದರೆ ದೀರ್ಘಾಯುಷಿಯಾಗಲಿ).
೮. ಓಂ ಇದಮಾಪಃ ಪ್ರವಹತ್ ಯತ್ಕಿಂಚ ದುರಿತಂ ಮಯಿಃ | ಯದ್ವಾಹಮಭದ್ರೋಹ ಯದ್ವಾಶೇಪ ಉತಾನೃತಂ ||
(ಎಲೈ ಉದಕಗಳಿರಾ, ನಾನು ಮಾಡಿರಬಹುದಾದ ದ್ರೋಹಗಳನ್ನು, ಬೈಗುಳದೊಂದಿಗೆ ನೀಡಿರಬಹುದಾದ ಶಾಪಗಳನ್ನು, ಆಡಿರಬಹುದಾದ ಅಸತ್ಯವನ್ನು ಮತ್ತು ಇವುಗಳ ಹೊರತಾದ ಎಲ್ಲ ಪಾತಕಗಳನ್ನು ದೂರ ಮಾಡಿ).
೯. ಓಂ ಆಪೋ ಅದ್ಯಾನ್ವಚಾರಿಷು ರಸೇನ ಸಮಗಸ್ಮಿಹಿ | ಪಯಸ್ವಾನಗ್ನ ಆ ಗಹಿ ತಂ ಮಾ ಸಂಸೃಜ ವರ್ಚಸಾ ||
(ನಾನು ಈ ದಿನ ಉದಕದಲ್ಲಿ ಪವಿತ್ರನಾಗಿರುವೆ. ನಾನು ಉದಕದ ಸಾರಭೂತದಿಂದ ಸಂಯುಕ್ತನಾಗಿದ್ದೇನೆ. ಈಗ ಹೇ ಅಗ್ನಿ, ಉದಕಯುಕ್ತನಾಗಿರುವ ನೀನು ಬಾ ಮತ್ತು ಉದಕಯುಕ್ತ ತೇಜಸ್ಸು ಉಂಟಾಗುವಂತೆ ಮಾಡು).
- #ಅಘ_ನಿಃಸಾರಣ
(ಅಘವೆಂದರೆ ಪಾಪ. ನಿಃಸಾರಣ = ಹೊರಗೆ ದಬ್ಬುವದು).
೧. ಓಂ ಋತಂ ಚ ಸತ್ಯಂಚಾಭೀದ್ಧಾತ ತಪಸೋsಧ್ಯಜಾಯತ |
ತತೋ ರಾತ್ರ್ಯಜಾಯತ ತತಃ ಸಮುದ್ರಾ ಅರ್ಣವಃ ||
(ಸೃಷ್ಟಿಯನ್ನು ನಿರ್ಮಾಣ ಮಾಡುವ ಮೊದಲು ಬ್ರಹ್ಮನು ತಪವಗೈದು ಹೇಗೆ ನಿರ್ಮಿಸಲೆಂದು ವಿಚಾರ ಮಾಡಿದನು. ಆ ಜಾಜ್ವಲ್ಯಮಾನ ತಪದಿಂದ ಸತ್ಯ ಮನಃ ಸಂಕಲ್ಪ ಮತ್ತು ಸತ್ಯ ಭೂಷಣರೆರಡೂ ಉದಿಸಿದವು. ಬಳಿಕ ರಾತ್ರಿ ಮತ್ತು ಹಗಲು ಹುಟ್ಟಿದವು. ಬಳಿಕ ಜಲಮಯ ಸಮುದ್ರ ಉತ್ಪನ್ನವಾಯಿತು).
೨. ಸಮುದ್ರಾ ದರ್ಣವಾ ದಧಿ ಸಂವತ್ಸರೋ ಅಜಾಯತ |
ಅಹೋರಾತ್ರಾಣಿ ವಿಧದದ್ ವಿಶ್ಯಸ್ಯಮಿಷತೋವಶೀ ||
(ಉದಕಪೂರ್ಣ ಸಮುದ್ರದ ನಂತರ ಸಂಸಾರಾತ್ಮಕ ಕಾಲ ಹುಟ್ಟಿತು. ಬಳಿಕ ಅಹೋರಾತ್ರಿ ಉಂಟು ಮಾಡುವ ಈಶ್ವರನು ಸಮಸ್ತ ವಿಶ್ವಕ್ಕೆ ನಿಯಾಮಕನಾದನು).
೩. ಸೂರ್ಯಾ ಚಂದ್ರಮ ಸೌ ಧಾತ ಯಥಾ ಪೂರ್ವಮಕಲ್ಪಯುತ |
ದಿಂಚ ಪೃಥ್ವಿವೀಂಚಾತರಿಕ್ಷಮಥೋಸ್ವಃ ||
ಆಚನಮ್ (ಕೇಶವಾದಿ ೨೪)
(ಪೂರ್ವ ಕಲ್ಪನೆಗಳಲ್ಲಿ ತಪಗೈದಂತೆ ಬ್ರಹ್ಮ ದೇವನು ಸೂರ್ಯ ಚಂದ್ರ, ವ್ಯಾಲೋಕ, ಪೃಥ್ವಿ, ಆಕಾಧ ಮತ್ತು ಸ್ವರಲೋಕಗಳನ್ನು ನಿರ್ಮಿಸಿದನು. ಅಂದರೆ ಚತುರ್ದಶ(೧೪) ಭುವನಗಳನ್ನು ಹುಟ್ಟಿಸಿದನು).
ಬಲ ಹಸ್ತದಲ್ಲಿ ಉದಕ ತೆಗೆದುಕೊಂಡು ಈ ಮಂತ್ರವನ್ನು ಪಠಿಸ ಬೇಕು ಕಡೆಗೆ ಬಲ ಮೂಗಿನ ಹೊಳ್ಳೆಯಿಂದ ಐಯಲ್ಲಿರುವ ನೀರಿನ ಮೇಲೆ ಶ್ವಾಸವನ್ನು ಬಿಡ ಬೇಕು. ಇದರಿಂದ ಶರೀರದಲ್ಲಿಯ ಪಾಪ ಪುರುಷನನ್ನು ಹೊರಗೆ ನೂಕಿದೆನು ಹೀಗೆಂದು ಭಾವನೆ ಮಾಡಿ ಕೊಳ್ಳಬೇಕು. ಮತ್ತು ಆ ಉದಕವನ್ನು ನೋಡದೆ ಎಡ ಪಕ್ಕದ ಕಡೆಗೆ ಚೆಲ್ಲಬೇಕು. ನಂತರ ಆಚಮನ ಮಾಡಬೇಕು.
- #ಅರ್ಘ್ಯ_ದಾನಮ್
ಸೂರ್ಯನ ಕಡೆಗೆ ಮುಖ ಮಾಡಿ ನಮ್ರವಾಗಿ ಎದ್ದು ನಿಲ್ಲಬೇಕು ಮತ್ತು ಬೊಗಸೆಯಲ್ಲಿ ನೀರು ತುಂಬಿಕೊಂಡು ಇಲ್ಲಿ ತಿಳಿಸಿದ ಮಂತ್ರ ಪಠಿಸಬೇಕು. ಮಂತ್ರೋಚ್ಛಾರದ ಕೊನೆಗೆ ಸೂರ್ಯನಿಗೆ ಅರ್ಘ್ಯ ದಾನ ಮಾಡಬೇಕು.
ಗಾಯತ್ರ್ಯಾಃ ವಿಶ್ವಾಮಿತ್ರ ಋಷಿಃ ಸವಿತಾ ದೇವತಾ ಗಾಯತ್ರಿ ಛಂದಃ ಶ್ರೀ ಸೂರ್ಯಾಯ ಅರ್ಘ್ಯ ಪ್ರದಾನೇ ವಿನಿಯೋಗಃ |
ಓಂ ಭೂರ್ಭುವ ಸ್ವಃ | ತತ್ ಸವಿತುರ್ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋಯೋನಃ ಪ್ರಚೋದಯಾತ್ | ಶ್ರೀ ಸೂರ್ಯ ನಾರಾಯಣಾಯ ನಮಃ ಇದಮರ್ಘ್ಯಂ ಸಮರ್ಪಯಾಮಿ |
ಏವಂತ್ರಿಃ (ಮೂರು ಸಾರಿ) ಅರ್ಘ್ಯ ಕೊಡಬೇಕು.
(ಬಳಿಕ ಕೈಯಲ್ಲಿ ನೀರು ತೆಗೆದುಕೊಂಡು ನೀರಿನ ಧಾರೆ ಬಿಡುತ್ತ ತನ್ನ ಸುತ್ತ ಪ್ರದಕ್ಷಿಣೆ ಮಾಡಬೇಕು. ಪ್ರದಕ್ಷಿಣೆ ಮಾಡುವಾಗ ಮೇಲೆ ತಿಳಿಸಿದ ಮಂತ್ರ ಹೇಳಬೇಕು. ನಂತರ ಆಸನದ ಮೇಲೆ ಕುಳಿತು ಆಚಮನ ಹಾಗೂ ಪ್ರಾಣಯಾಮ ಮಾಡಬೇಕು).
ಓಂ ಅಸೌ ಆದಿತ್ಯಃ ಬ್ರಹ್ಮ |
(ಸೂರ್ಯನು ಪ್ರತ್ಯಕ್ಷ ಪರಬ್ರಹ್ಮನಿರುತ್ತಾನೆ).
ಅನಂತರ ಆಚಮನ ಮಾಡಬೇಕು |
ನಂತರ ಪ್ರಾಣಯಾಮ ||
- #ಭೂತೋಚ್ಛಾಟನಂ
ಪೃಥ್ವಿವ್ಯಾ ಮೇರು ಪೃಷ್ಠ ಋಷಿಃ ಕೂರ್ದೋದೇವತಾ |
ಸುತಲಂ ಛಂದಃ |
ಆಸನೆ ವಿನಿಯೋಗಃ |
ಓಂ ಪೃಥ್ವಿತ್ವಯಾಧೃತಾಲೋಕಾ ದೇವಿ ತ್ವಂ ವಿಷ್ಣುನಾಧೃತಾ |
ತಂಚಧಾರಯ ಮಾಂ ದೇವಿ ಪವಿತ್ರಂ ಕುರುಚಾಸನಂ |
ಅಪಸರ್ಪಂತು ತೇ ಭೂತಾ ಯೇ ಭೂತಾ ಭುವಿ ಸಂಸ್ಥಿತಾಃ |
ಯೇ ಭೂತಾ ವಿಘ್ನಕರ್ತಾರಸ್ತೆನಶ್ಯಂತು ಶಿವಜ್ಞಯಾ |
ಅಪಕ್ರಾಮಂತು ಭೂತಾನಿ ಪಿಶಾಚಾಃ ಸರ್ವತೋದಿಶಂ |
ಸರ್ವೇಷಾಮವಿರೋಧೇನ ಬ್ರಹ್ಮ ಕರ್ಮ ಸಮಾರಭೆ |
ಅಥಃ ಕರನ್ಯಾಸ:
ಓಂ ತತ್ ಸವಿತುಃ ಅಂಗುಷ್ಟಾಭ್ಯಾ ನಮಃ |
ಓಂ ವರೇಣ್ಯಂ ತರ್ಜನೀಭ್ಯಾ ನಮಃ |
ಓಂ ಭರ್ಗೋ ದೇವಸ್ಯ ಮಧ್ಯಮಾಭ್ಯಾಂ ನಮಃ |
ಓಂ ಧೀಮಹಿ ಅನಾಮಿಕಾಭ್ಯಾಂ ನಮಃ |
ಓಂ ಧಿಯೋಯೋನಃ ಕನಿಷ್ಠಿಕಾಭ್ಯಾಂ ನಮಃ |
ಓಂ ಪ್ರಚೋದಯಾತ್ ಕರತಲ ಕರಪೃಷ್ಠಾಭ್ಯಾಂ ನಮಃ |
ಅಥಃ ಷಡಂಗನ್ಯಾಸಃ –
ಓಂ ತತ್ ಸವಿತುರ್ ಹೃದಯಾಯ ನಮಃ |
ಓಂ ವರೇಣ್ಯಂ ಶಿರಸೆ ಸ್ವಾಹಾ |
ಓಂ ಭರ್ಗೋ ದೇವಸ್ಯ ಶಿಖಾಯೈ ವೌಷಟ್ |
ಓಂ ಧೀಮಹಿ ಕವಚಾಯ ಹುಂ |
ಓಂ ಧಿಯೋಯೋನಃ ನೇತ್ರಾಭ್ಯಾಂ ವೌಷಟ್ |
ಓಂ ಪ್ರಚೋದಯಾತ್ ಅಸ್ತ್ರಾಯ ಫಟ್ ||
(ಈ ಪ್ರಕಾರ ಆಯಾ ಮಂತ್ರಗಳಿಂದ ಆಯಾ ಅವಯವಗಳನ್ನು ಸ್ಪರ್ಶ ಮಾಡಬೇಕು)
ಮುಕ್ತಾ ವಿದ್ರುಮ ಹೇಮ ನೀಲ ಧವಲಚ್ಛಾಯೈ ಮುಖೈ ತೀಕ್ಷಣೈಃ |
ಯುಕ್ತಾ ಮಿಂದುಕಲಾನಿಬದ್ಧ ರತ್ನ ಮುಕುಟಾಂ | ತತ್ವಾರ್ಥ ವರ್ಣಾತ್ಮಿಕಾಂ ಗಾಯತ್ರಿಂ ವರದಾ ಭಯಾಂಕುಶಕಶಾಂ |
ಶುಭ್ರಂ ಕಪಾಲಂ ಗುಣಂ |
ಶಂಖಂ ಚಕ್ರಂ ಧಾರವಿಂದಯುಗಲಂ ಹಸ್ತೈರ್ವಹಂತಿ ಭಜೆ ||
- #ಗಾಯತ್ರಿ_ಜಪಃ
ಗಾಯತ್ರಿ ಜಪವೆಂದರೆ ಗಾಯತ್ರಿ ಮಂತ್ರವನ್ನು ಯಾರಿಗೂ ಕೇಳಿಸದಂತೆ ಮೆಲ್ಲಗೆ ಮನಸ್ಸಿನಲ್ಲಿ ಜಪ ಮಾಡಬೇಕು.
ಗಾಯತ್ರಿ ಮಂತ್ರವನ್ನು ಎದ್ದು ನಿಂತು ಜಪಿಸಬೇಕು. ಜಪಿಸುವಾಗ ಅರ್ಥವು ಲಕ್ಷ್ಯದಲ್ಲಿರಬೇಕು. ವೇಳೆಯ ಅನುಕೂಲ ದೊರೆತಂತೆ ೨೮, ೧೦೮, ೧೦೦೦ ಈ ಪ್ರಕಾರವಾಗಿ ಜಪ ಮಾಡಬೇಕು. ಯಾಕೆಂದರೆ ಸಂಧ್ಯೆಯಲ್ಲಿ ಗಾಯತ್ರಿ ಜಪವೆ ಮಹತ್ವದ್ದಾಗಿರುತ್ತದೆ.
ಅಗಚ್ಛ ವರದೆ ದೇವಿ ಜಪೆ ಮೆ ಸನ್ನಿಧೌ ಭವ | ಗಾಯಂತಾ ತ್ರಾಯತೇಯಸ್ಮಾತ್ ಗಾಯತ್ರೀತ್ವಂ ತತಃಸ್ಮೃತಾಃ ||
(ಗಾಯತ್ರಿ ದೇವಿ | ನೀನು ವರಪ್ರದಳು | ಜಪದ ಸಮಯದಲ್ಲಿ ನನ್ನ ಹತ್ತಿರ ಬಂದಿರು. ನೀನು ಜಪಿಸುವವರ ರಕ್ಷಣೆ ಮಾಡುವಿ ಎಂದು ನಿನಗೆ ಗಾಯತ್ರಿ ಎಂಬ ಅನ್ವರ್ಥಕ ನಾಮ ಬಂದಿರುತ್ತದೆ).
ಗಾಯತ್ರ್ಯಾ ವಿಶ್ವಾಮಿತ್ರ ಋಷಿಃ ಸವಿತಾ ದೇವತಾ ಗಾಯತ್ರಿ ಛಂದಃ ಗಾಯತ್ರಿ ಶಿರಸಃ ಜಪೇ ವಿನಿಯೋಗಃ |
ಓಂ | ಭೂರ್ಭುವ ಸ್ವಃ | ತತ್ ಸವಿತುರ್ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋಯೋನಃ ಪ್ರಚೋದಯಾತ್ ||
ಇತಿ ಗಾಯತ್ರಿ ಜಪಃ ||
(ಯಾವನು ನಮ್ಮ ಬುದ್ಧಿಗೆ ಪ್ರೇರಣೆ ಮಾಡುವನೋ, ವಿಶ್ವವನ್ನು ಉತ್ಪನ್ನ ಮಾಡುವನೊ, ಅಂತಹ ಪ್ರಕಾಶಮಾನವಾದ ಸೂರ್ಯ ನಾರಾಯಣನು ಎಲ್ಲರಿಗೂ ಆಧಾರವಾಗಿದ್ದು, ಅವನ ತೇಜಸ್ಸಿನ ಧ್ಯಾನ ಮಾಡುವೆನು).
- #ಉಪಸ್ಥಾನಮ್
(ಉಪಸ್ಥಾನವೆಂದರೆ ಸ್ಮೃತಿ. ಎದ್ದು ನಿಂತು ಕರಗಳ ಜೋಡಿಸಿ ಈ ಪ್ರಾರ್ಥನೆಯ ಮೂರು ಮಂತ್ರಗಳನ್ನು ಪಠಿಸಬೇಕು).
ಓಂ ಜಾತವೇದಸೆ ಸುನವಾಮ ಸೋಮಂ ಮರಾತೀಯತೊ ನಿದಹಾತಿ ವೇದಃ |
ಸ ನಃ ಪರ್ಷದತಿ ದುರ್ಗಾಣಿ ವಿಶ್ವಾನಾವೇವ ಸಿಂಧುಂ ದುರಿತಾತ್ಯಗ್ನಿಃ ||
(ಜಾತವೇದನೆಂಬ ಅಗ್ನಿಗೋಸ್ಕರ ನಾವು ಸೋಮರಸವನ್ನು ತೆಗೆಯುವೆವು. ಆ ಅಗ್ನಿಯು ನಮ್ಮ ಕೂಡ ಶತ್ರುತ್ವದಿಂದ ನಡೆದುಕೊಳ್ಳುವವರ ಧನವನ್ನೆಲ್ಲ ದಹಿಸಲಿ ಮತ್ತು ನಮ್ಮನ್ನು ಎಲ್ಲ ಸಂಕಟಗಳಿಂದ ಪಾರು ಮಾಡಲಿ).
ಓಂ ತಚ್ಛಂ ಯೋರಾವೃಣಿಮಹೇ ಗಾತುಂ ಯಜ್ಞಾಯಗಾತುಂ ಯಜ್ಞಪತಯೆಃ |
ದೈವಿ ಸ್ವಸ್ತುರಸ್ತುನಃ ಸ್ವಸ್ತಿರ್ಮಾನುಷೇಭ್ಯಃ |
ಊರ್ಧ್ವಂ ಜಿಗಾತು ಭೇಷಜಮ್ |
ಶಂನೋ ಅಸ್ತು ದ್ವಿಪದಃ ಶಂ ಚತುಷ್ಪದೆ |
(ನಾವಿಕನು ನೌಕೆಯಿಂದ ಹೇಗೆ ನದಿಯನ್ನು ದಾಡಿಸುವನೊ ಅದೆ ಪ್ರಕಾರವಾಗಿ ಅಗ್ನಿಯು ನಮ್ಮನ್ನು ಸಮಸ್ತ ಪಾಪಗಳಿಂದ ಮುಕ್ತವಾಗುವಂತೆ ಮಾಡಲಿ ಎಂಬುದಾಗಿ ಸ್ತುತಿಸಬೇಕು).
ನಮೋ ಬ್ರಹ್ಮಣೆಃ ನಮೋ ಅಸ್ವಗ್ನಯೆ, ನಮಃ ಪೃಥ್ವಿವೈ ನಮಃ ಔಷಧೀಧ್ಯಃ ||
ನಮೋ ವಾಚೆ ನಮೋ ವಾಚಸ್ಪತಯೆ ನಮೋ ವಿಷ್ಣವೆಃ ಮಹತೆ ಕರೋಮಿ.
(ಬ್ರಹ್ಮ ದೇವ, ಅಗ್ನಿ, ವಾಗ್ದೇವತಾ, ವಾಚಸ್ಪತಿ ಮತ್ತು ಮಹಾ ವಿಷ್ಣುವಿಗೆ ನಮಿಸುತ್ತೇನೆ).
- #ದಿಗ್ವಂದನಮ್
(ಎದ್ದು ನಿಂತು ಕರಗಳನ್ನು ಜೋಡಿಸಿ ಸಮಸ್ತ ದಿಕ್ಕುಗಳಿಗೂ, ದಿಶಾಧಿಪತಿಗಳಿಗೂ ನಮಸ್ಕಾರ ಮಾಡಬೇಕು).
೧. ಓಂ ಪ್ರಾಚ್ಚೈ ದಿಶೇ… ಇಂದ್ರಾಯ ನಮಃ |
೨. ಅಗ್ನಿಯೈ ದಿಶೇ… ಅಗ್ನಿಯೆ ನಮಃ |
೩. ದಕ್ಷಿಣಾಯೈ ದಿಶೇ… ಯಮಾಯ ನಮಃ |
೪. ನೈಋತ್ಯ ದಿಶೇ…ನಿಋತಯೆ ನಮಃ |
೫. ಪ್ರತೀಚ್ಚೈ ದಿಶೇ… ವರುಣಾಯ ನಮಃ |
೬. ಅಯುವ್ಯ ದಿಶೇ.. ವಾಯುವೆ ನಮಃ |
೭. ಉದೀಚ್ಚೈ ದಿಶೇ….. ಸೋಮಾಯ ನಮಃ |
೮. ಈಶಾನ್ಯ ದಿಶೇ… ಈಶ್ವರಾಯ ನಮಃ |
೯. ಊರ್ಧ್ವಾಯೈ ದಿಶೇ…. ಬ್ರಹ್ಮಣೆ ನಮಃ |
೧೦. ಅಧರಾಯೈ ದಿಶೇ…. ಅನಂತಾಯ ನಮಃ |
- ಈ ದಿಗ್ವಂದನೆಯ ನಂತರ ಅಂತರಿಕ್ಷಾಯೈ ದಿಶೇ ಎನ್ನುವ ಪರಿಪಾಠವೂ ಉಂಟು.
- #ಅಭಿವಾದನಮ್
ಸರ್ವಾರಿಷ್ಟ ಶಾಂತಿರಸ್ತು ಸಮಸ್ತ ಮಂಗಲ ವಾಪ್ತಿರಸ್ತು ಚತುಃಸಾಗರ ಪರ್ಯಂತಂ ಗೋ ಬ್ರಾಹ್ಮಣೇಭ್ಯಃ ಶಿವಂ ಭವಂತು ಸರ್ವೇ ಜನಾಃ ಸುಖಿನೊ ಭವಂತು…… ಪ್ರವರ ಸಹಿತ ಗೋತ್ರ ಉಚ್ಛಾರ ಮಾಡಬೇಕು……. ಗೋತ್ರೋತ್ಪನ್ನಃ ಋಗ್ವೇದಸ್ಯ ಅಶ್ವಲಾರ್ಯನಸೂತ್ರ ಶಾಕಲ ಶಾಕಾಧ್ಯಾಯಿ …… ಶರ್ಮ ಅಹಂ ಗುರೊ ಅಭಿವಾದಯೆ ಅಭಿವಾದಯಾಮಿ |
ಅಸತ್ಯ ಲೋಕ ಪಾತಾಲಾದಾಲೋಕ ಲೋಕ ಪರ್ವತಾತ್ | ಯೇ ಸಂತಿ ಬ್ರಾಹ್ಮಣಾ ದೇವಾ, ಸ್ತೇಭ್ಯೋ ನಿತ್ಯಂ ನಮೋ ನಮಃ |
ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಮ್ | ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ |
- #ಭಗವದರ್ಪಣಮ್
ಯಸ್ಯಸ್ಮೃತ್ಯಾ ಚನಾಮೋಕ್ತಾ ತಪಃ ಸಂಧ್ಯಾ ಕ್ರಿಯಾಧಿಷು |
ನ್ಯೂನಂ ಸಂಪೂರ್ಣತಾಂ ಯಾತಿ ಸಂದ್ಯೋವಂದ್ಯೆ ತಮಚ್ಯುತಂ |
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಜನಾರ್ಧನಃ |
ಯತ್ಕೃತಂತು ಮಯಾದೇವಾ ಸಂಧ್ಯಾ ಪರಿಪೂರ್ಣಂ ತದತ್ಸುಮೆ |
ಅನೇನ ಪ್ರಾತಃ (ಸಾಯಂ) ಸಂಧ್ಯಾವಂದನೇನ ಭಗವಾನ್ ಸರ್ವಾತ್ಮಕಃ ಶ್ರೀ ಸೂರ್ಯ ನಾರಾಯಣ ಪ್ರಿಯತಾಂ ಶ್ರೀ ಕೃಷ್ಣಾರ್ಪಣಮಸ್ತು | (ನೀರು ಬಿಡಬೇಕು)
ಯದಕ್ಷರ ಪರಭ್ರಷ್ಟಂ ಮಾತ್ರಾಹೀನಂ ಯದ್ಭವೇತ್ | ತತ್ಸರ್ವ್ಯಂ ಕ್ಷಮ್ಯತಾ ದೇವಃ ಪ್ರಸೀದ ಪರಮೇಶ್ವರ ||
(ಮತ್ತೊಮ್ಮೆ ನೀರು ಬಿಟ್ಟು ಆಚಮನ ಮಾಡಬೇಕು)
ಮಂತ್ರ ಮಧ್ಯೆ ಕ್ರಿಯಾ ಮಧ್ಯೆ ವಿಷ್ಣೋಃ ಸ್ಮರಣಪೂರ್ವಕಂ ಯತ್ಕಿಂಚ ಕ್ರಿಯತೆ ಕರ್ಮ ತತ್ಕರ್ಮಂ ಸಫಲಂ ಭವೇತ್ ||
ವಿಷ್ಣವೆ ನಮಃ |
ಶ್ರೀ ಕೃಷ್ಣಾರ್ಪಣಮಸ್ತು ||
(ಸಂಧ್ಯಾವಂದನೆ ಸಮಾಪ್ತಿ)
ಯಜ್ಞೋಪವೀತಾಭಿಮಂತ್ರಣಂ
ಆಚಮನ, ಪ್ರಾಣಯಾಮ, ದೇಶಕಾಲೋಚ್ಛರಣೆ ಮಾಡಿ,
“ಶ್ರೀ ಪರಮೇಶ್ವರ ಪ್ರೀತ್ಯರ್ಥಂ ನಿತ್ಯ ಕರ್ಮಾನುಷ್ಠಾನ ಸಿದ್ಧರ್ಥ್ಯಂ ಯಜ್ಞೋಪವೀತ ಧಾರಣಂ ಚ ಕರಿಷ್ಯೆ”
ಎಂದು ಸಂಕಲ್ಪ ಮಾಡಬೇಕು.
ಬಳಿಕ ಯಜ್ಞೋಪವೀತವನ್ನು ಹತ್ತು ಸಲ ಗಾಯತ್ರಿ ಮಂತ್ರದಿಂದ ಅಭಿಮಂತ್ರಿಸಿ ನೀರನ್ನು ಪ್ರೋಕ್ಷಿಸಬೇಕು.
“ಬ್ರಹ್ಮಣಮಾವಾಹಯಾಮಿ ವಿಷ್ಣುಮಾವಾಹಯಾಮಿ ರುದ್ರಮಾವಾಹಯಾಮಿ”
ಎಂದು ದೇವತೆಗಳನ್ನು ಆಹ್ವಾನಿಸಿ,
ಓಂಕಾರಂ ಪ್ರಥಮ ತಂತೌ ನ್ಯಸಾಮಿ |
ಅಗ್ನಿಂ ದ್ವಿತೀಯ ತಂತೌ ನ್ಯಸಾಮಿ |
ನಾಗಾಂಸ್ತೃತೀಯ ತಂತೌ ನ್ಯಸಾಮಿ |
ಸೋಮಂ ಚತುರ್ಥ ತಂತೌ ನ್ಯಸಾಮಿ |
ಪಿತೃನ್ ಪಂಚಮ ತಂತೌ ನ್ಯಸಾಮಿ |
ಪ್ರಜಾಪತಿಂ ಷಷ್ಟಮ ತಂತೌ ನ್ಯಸಾಮಿ | ಸೂರ್ಯಂ ಅಷ್ಟಮ ತಂತೌ ನ್ಯಸಾಮಿ |
ವಿಶ್ವಾನ್ ದೇವಾನ್ ನವಮ ತಂತೌ ನ್ಯಸಾಮಿ |
ಋಗ್ವೇದಂ ಪ್ರಥಮ ದೋರಕೆ ನ್ಯಸಾಮಿ | ಯಜುರ್ವೇದಂ ದ್ವಿತೀಯ ದೋರಕೆ ನ್ಯಸಾಮಿ | ಸಾಮವೇದಂ ತೃತೀಯ ದೋರಕೆ ನ್ಯಸಾಮಿ | ಅಥರ್ವ ವೇದಂ ಗ್ರಂಥೌ ನ್ಯಸಾಮಿ |
ಹೀಗೆ ಆವಾಹನ ಮಾಡಿ ಧಾರಣ ಮಾಡುವ ಯಜ್ಞೋಪವೀತಕ್ಕೆ ಹತ್ತು ಸಲ ಗಾಯತ್ರಿ ಮಂತ್ರ ಜಪಿಸಬೇಕು.
“ಉದ್ಯುತ್ತಂ ಜಾತವೇದಸೆ ದೇವಂವಹಂತ ಕೇತವಃ ದೃಶೆ ವಿಶ್ವಾಯ ಸೂರ್ಯಂ” ಎಂದು ಸೂರ್ಯನಿಗೆ ತೋರಿಸಿ ಬಳಿಕ ಗಾಯತ್ರಿ ಮಂತ್ರವನ್ನು ಪಠಿಸಿ ಮೂರು ಸಲ ಎರಡೂ ಕೈಗಳಿಂದ ಯಜ್ಞೋಪವೀತವನ್ನು ತಟ್ಟಿ ನಂತರ ದೇವರಿಗೆ ಸಮರ್ಪಿಸಿ,
“ಓಂ ಯಜ್ಞೋಪವೀತಮಿತಿ ಮಂತ್ರಸ್ಯ ಪರಬ್ರಹ್ಮಂ ಋಷಿಃ ||
ದೇವತಾತೃಷ್ಟುಪ್ ಛಂದಃ ಯಜ್ಞೋಪವೀತ ಧಾರಣೆ ವಿನಿಯೋಗಃ ||”
“ಓಂ ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ”
ಎಂದು ಹೇಳಿ ಯಜ್ಞೋಪವೀತವನ್ನು ಧರಿಸಬೇಕು.
ಪುನರಾಚಮನ ಮಾಡಿ ಜೀರ್ಣ ಯಜ್ಞೋಪವೀತವನ್ನು ಕೆಳಗಿನಿಂದಲೆ ತೆಗೆದು ಸಮುದ್ರಂ ಗಚ್ಛಂ ಸ್ವಾಹಾ ಎಂದು ಜಲದಲ್ಲಿ ವಿಸರ್ಜಿಸಿ ವಿಷ್ಣು ಸ್ಮರಣೆ ಮಾಡಿ.
ಆಚಮನ -೨೪ |
ಸಮಾಪ್ತಂ
I. #ಸೂರ್ಯ_ನಮಸ್ಕಾರಃ
ಆಚಮ್ಯ (ಕೇಶವಾದಿ ೨೪) ಪ್ರಾಣಾಯಾಮಃ |
ಏವಂ ಗುಣ ವಿಶೇಷಣ ವಿಶಿಷ್ಠಾಯಾಂ…ಶುಭತಿಥೌ…ಮಮ ಆತ್ಮನಃ ಪುರಾಣೋಕ್ತ ಫಲ ಪ್ರಾಪ್ತ್ಯರ್ಥಂ ಸೂರ್ಯ ನಮಸ್ಕಾರಾಖ್ಯಂ ಕರ್ಮ ಕರಿಷ್ಯೆ |
(ನೀರು ಬಿಡಬೇಕು)
ಅಥಃ ಧ್ಯಾನಂ ||
ದ್ಯೇಯಃ ಸದಾ ಸವಿತೃ ಮಂಡಲ ಮಧ್ಯವರ್ತಿ |
ನಾರಾಯಣಃ ಸರಸಿಜಾಸನ ಸನ್ನಿವಿಷ್ಟಃ |
ಕೇಯೂರವಾನ್ ಮಕರ ಕುಂಡಲವಾನ್,
ಕಿರೀಟಿಹಾರಿ ಹಿರಣ್ಮಯವಪುಃ ಧೃತ ಶಂಖಚಕ್ರಃ ||೧||
೧. ಓಂ ಮಿತ್ರಾಯ ನಮಃ |
೨. ಓಂ ರವಯೆ ನಮಃ |
೩. ಓಂ ಸೂರ್ಯಾಯ ನಮಃ |
೪. ಓಂ ಭಾನವೆ ನಮಃ |
೫. ಓಂ ಖಗಾಯ ನಮಃ |
೬. ಓಂ ಪೂಷ್ಣೇ ನಮಃ |
೭. ಓಂ ಹಿರಣ್ಯಗರ್ಭಾಯ ನಮಃ |
೮. ಓಂ ಮರೀಚಿಯೆ ನಮಃ |
೯. ಓಂ ಆದಿತ್ಯಾಯ ನಮಃ |
೧೦. ಓಂ ಸವಿತ್ರೇ ನಮಃ |
೧೧. ಓಂ ಅರ್ಕಾಯ ನಮಃ |
೧೨. ಓಂ ಭಾಸ್ಕರಾಯ ನಮಃ |
ಶ್ರೀ ಸವಿತಾ ಸೂರ್ಯ ನಾರಾಯಣಾಯ ನಮಃ ||
ಆದಿತ್ಯಸ್ಯ ನಮಸ್ಕಾರಂ ಯೇ ಕುರ್ವಂತಿ ದಿನೆ ದಿನೇ |
ಜನ್ಮಾಂತರ ಸಹಸ್ರೇಷು ದಾರಿದ್ರ್ಯಂ ನೋಪ ಜಾಯತೆ ||
ತೀರ್ಥ_ಪ್ರಾಶನ: ಬಲಗೈಯಲ್ಲಿ ಒಂದೆರಡು ಸವಟು ನೀರು ಹಾಕಿಕೊಂಡು ಕೆಳಗಿನ ಮಂತ್ರ ಪಠಿಸಿ ಕುಡಿಯಬೇಕು.
ಅಕಾಲ ಮೃತ್ಯುಹರಣಂ, ಸರ್ವ ವ್ಯಾಧಿ ವಿನಾಶನಮ್ |
ಸೂರ್ಯ ಪಾದೋದಕಂ ಜಠರೆ ಧಾರಯಾಮ್ಯಹಂ ||
ಅನೇಕ ದ್ವಾದಶ ಸೂರ್ಯ ನಮಸ್ಕಾರಾಖ್ಯೇನ ಕರ್ಮಣಾ ಶ್ರೀ ಸವಿತಾ ಸೂರ್ಯ ನಾರಾಯಣಃ ಪ್ರಿಯತಾಂ | ಪ್ರೀತೊ ಭವತು |
ಶ್ರೀ ಕೃಷ್ಣಾರ್ಪಣಮಸ್ತು |
ಆಚಮ್ಯ (ಕೇಶವಾದಿ ೨೪)
II. #ಊಟಕ್ಕೆಕುಳಿತುಕೊಳ್ಳುವಮಂತ್ರ
ಓಂ | ಭೂರ್ಭುವ ಸ್ವಃ | ತತ್ ಸವಿತುರ್ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋಯೋನಃ ಪ್ರಚೋದಯಾತ್ || ಸತ್ಯಂತ್ ವರ್ತೇನ ಪರಿಷಂಚಾಮಿ |
ಬಲಗೈಯಲ್ಲಿ ೪-೫ ಸವಟು ನೀರು ಹಾಕಿಕೊಂಡು ಊಟಕ್ಕೆ ಬಡಿಸಿದ ಎಲೆಯ ಸುತ್ತ ಸುತ್ತಿ ನಂತರ ಅನ್ನಕ್ಕೆ ಅಭಿಗಾರ (ತುಪ್ಪ) ಹಚ್ಚಿ ಕೊಂಡು ಎಲೆಯ ಬಲ ಭಾಗದಲ್ಲಿ ಕೆಳಗಿನಿಂದ ಮೇಲಕ್ಕೆ ನಾಲ್ಕು ಬಾರಿ ಚಿತ್ರಾವತಿ ಇಡುವಾಗ ಕೆಳಗಿನಂತೆ ಹೇಳಬೇಕು.
“ಚಿತ್ರಾಯ ನಮಃ |
ಚಿತ್ರಗುಪ್ತಾಯ ನಮಃ |
ಯಮಾಯ ನಮಃ |
ಯಮ ಧರ್ಮಾಯ ನಮಃ |
(ಕೆಲವರು ಓಂ ಭೂಪತಯೆ ನಮಃ | ಓಂ ಭುವನಪತಯೆ ನಮಃ | ಓಂ ಭೂತಾನಾಂಪತಯೆ ನಮಃ | ಹೀಗೆ ಮೂರು ಬಾರಿ ಚಿತ್ರಾವತಿ ಇಡುವ ಪರಿಪಾಠವೂ ಉಂಟು).
ಆಮೇಲೆ ಬಲಗೈಯಲ್ಲಿ ೨ ಸವಟು ನೀರು ಹಾಕಿಕೊಂಡು ಕೆಳಗಿನ ಶ್ಲೋಕ ಹೇಳಿ ಕೊಂಡು ನಂತರ ನೀರು ಪ್ರಾಶನ ಮಾಡಬೇಕು.
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ |
ಪ್ರಾಣಾಪಾನ ಸಮಾಯುಕ್ತಂ, ಪಂಚಾಮ್ಮನ್ನಂ ಚತುರ್ವಿಧಂ |
ಅಮೃತೋಪಸ್ತರಣಮಸಿ ||
ಆಮೇಲೆ ಕೈ ಬೆರಳುಗಳಿಗೆ ಬರುವಷ್ಟು ಅನ್ನ ತೆಗೆದುಕೊಂಡು ಎಲೆ ಹಿಡಿದು ಕೆಳಗಿನ ಮಂತ್ರ ಹೇಳುತ್ತ ಆರು ಬಾರಿ ಅನ್ನ ತೆಗೆದುಕೊಂಡು ನಂತರ ಎಡಗೈಗೆ ನೀರು ಹಚ್ಚಿ ಕೊಳ್ಳಬೇಕು.
೧. ಓಂ ಪ್ರಾಣಾಯ ಸ್ವಾಹಾ
೨. ಅಪನಾಯ ಸ್ವಾಹಾ
೩. ವ್ಯಾನಾಯ ಸ್ವಾಹಾ
೪. ಉದಾನಾಯ ಸ್ವಾಹಾ
೫. ಸಮನಾಯ ಸ್ವಾಹಾ
೬. ಓಂ ಬ್ರಹ್ಮಣೆ ಸ್ವಾಹಾ
ಆಮೇಲೆ ಊಟವಾದ ನಂತರ ಕೈಯಲ್ಲಿ ನೀರು ಹಾಕಿಕೊಂಡು, “ಅಮೃತಾಪಿ ಧಾನಮಸಿ” ಎಂದು ನೀರು ಕುಡಿದು, “ವಾತಾಪಿ ಜೀರ್ಣೋಭವ” ಎಂದು ಉಚ್ಛರಿಸುತ್ತ ಎಡಗೈಯಿಂದ ಹೊಟ್ಟೆಯ ಮೇಲೆ ಕೈ ಆಡಿಸಬೇಕು. ಆಮೇಲೆ ಊಟದಿಂದ ಎದ್ದು ಕೈ ತೊಳೆದು ಕೊಂಡು ಆಚಮನ ಮಾಡಿ ಎಲೆ ಅಡಿಕೆ (ಮುಖ ಭಕ್ಷಣ) ಸ್ವೀಕರಿಸಬೇಕು.
III #ದೇವರಿಗೆನೈವೇದ್ಯಮಾಡುವ_ಮಂತ್ರ
ಹಬ್ಬ ಹುಣ್ಣಿಮೆ ಅಥವಾ ದಿನಾಲು ಮಾಡಿದ ಅಡುಗೆ ನೈವೇದ್ಯ ಮಾಡುವಾಗ ದೇವರ ಮುಂದೆ ದೀಪ ಹಚ್ಚಿ.
ಓಂ | ಭೂರ್ಭುವ ಸ್ವಃ | ತತ್ ಸವಿತುರ್ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋಯೋನಃ ಪ್ರಚೋದಯಾತ್ ||
ದೇವರ ಮುಂದೆ ಬಡಿಸಿಟ್ಟ ಎಲೆಗೆ ಸುತ್ತಲೂ ನೀರು ಸುತ್ತಿ.
೧. ಓಂ ಪ್ರಾಣಾಯ ಸ್ವಾಹಾ
೨. ಅಪನಾಯ ಸ್ವಾಹಾ
೩. ವ್ಯಾನಾಯ ಸ್ವಾಹಾ
೪. ಉದಾನಾಯ ಸ್ವಾಹಾ
೫. ಸಮನಾಯ ಸ್ವಾಹಾ
೬. ಓಂ ಬ್ರಹ್ಮಣೆ ಸ್ವಾಹಾ
ಎಂಬುದಾಗಿ ಮಂತ್ರೋಚ್ಛಾರಣೆ ಮಾಡಿ, “ಇಷ್ಟ ದೇವತಾ ಕುಲ ದೇವತಾಭ್ಯೋ ನಮಃ ಭಕ್ಷ್ಯ ಭೋಜ್ಯ ಮಹಾ ನೈವೇದ್ಯಂ ಸಮರ್ಪಯಾಮಿ” ಎಂದು ಹೇಳಿ ದೀಪ ಹಚ್ಚಿ ಆರತಿ ಮಾಡಬೇಕು. ಮಂತ್ರಾಕ್ಷತೆ ಹಾಕಿ ದೇವರಿಗೆ ಕೈಮುಗಿಯಬೇಕು. ಕುಲ ದೇವತಾ ಪ್ರಾರ್ಥನೆ ಮಾಡಬೇಕು.
IV. #ಹಬ್ಬಹುಣ್ಣಿಮೆಗಳಲ್ಲಿಬ್ರಾಹ್ಮಣರಿಗೆಊಟಕ್ಕೆಕರೆದುಊಟಕ್ಕೆಕೂಡುವಮೊದಲುಸಂಕಲ್ಪಬಿಡುವುದುಅಥವಾಮತ್ತೊಬ್ಬರಮನೆಗೆಊಟಕ್ಕೆ ಹೋದಾಗಮನೆಯ ಯಜಮಾನನಿಂದಸಂಕಲ್ಪ ಮಾಡಿಸುವಮಂತ್ರ:
ಓಂ ಭೂರ್ಭುವ ಸ್ವಃ |
ತತ್ ಸವಿತುರ್ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ |
ಧಿಯೋಯೋನಃ ಪ್ರಚೋದಯಾತ್ ||
ಪ್ರಜಾಪತೇನತ್ವಾ ವೇ ತಾನ್ಯನ್ಯೋ ವಿಶ್ವ ಜಾತಾನಿ ಪರಿತಾಬಭೂವ |
ಯತ್ಕಿಮಾಸ್ತೆ ಜುಹು ಮಸ್ತನ್ನೋ ಅಸ್ತು ವಯಂಸ್ಯಾಮ ಪತಯೋರಯೀಣಾಂ |
ಏಕೋ ವಿಷ್ಣುರ್ಮಹಭೂತಂ, ಪೃಥಗ್ ಭೂತಾನ್ಯನೇಕಶಃ ತ್ರಿಂಲೋಕಾನ್ ವ್ಯಾಪ ಭೂತಾತ್ಮಾ ಭುಂಕ್ತೇ ವಿಶ್ವ ಭುಗವ್ಯಯಃ ಅನೇನ ಬ್ರಾಹ್ಮಣ ಸುವಾಸಿನಿ ಪೂಜಾ ಸಮಾರಾಧನೇನ ಭಗವಾನ್ ಇಷ್ಟ ದೇವತಾ ಕುಲ ದೇವತಾಃ ಪ್ರಿಯತಾಂ |
ಯಂತುನದಯೋ ವರ್ಷಂತು ಪರ್ಜನ್ಯಾಃ | ಸುಪಿಪ್ಪಲಾ ಔಷಧಯೋ ಭವಂತು |
ಅನ್ನ ವತಾ ಮೋದನ ವತಾ ಮಾಮೀಕ್ಷವತಾಂ | ಯೇಷಾಂ ರಾಜಾ ಭೂಯಸಂ |
ಓದನ ಮಬ್ರುವತೆ ಪರಮೇಷ್ಠಿವಾ ಏಷಃ | ಯದೋದನಃ |
ಪರಮಾಮೇವೈನಂ ಶ್ರೀಯಂಗಮಯತಿ ||
ಓಂ ನಮಃ ಪಾರ್ವತಿಪತೇ ಹರಹರ ಮಹಾದೇವ
ಶ್ರೀ ಗುರು ದೇವ ದತ್ತ
ಲಕ್ಷ್ಮೀ ರಮಣ ಗೋವಿಂದ ಗೋವಿಂದ