ಸಿಟ್ಟು ಮಾಡಿದರುಂಟೆ ಶ್ರೀಕೃಷ್ಣನಲ್ಲಿ|

ಸಿಟ್ಟು ಮಾಡಿದರುಂಟೆ ಶ್ರೀಕೃಷ್ಣನಲ್ಲಿ|
ಕೊಟ್ಟು ಹುಟ್ಟದೆ ಮುನ್ನ ಈ ಸೃಷ್ಟಿಯಲ್ಲಿ||

ನೆಲವ ತೋಡಿದರಿಲ್ಲ |ಛಲದಿ ಹೋರಿದರಿಲ್ಲ |
ಕುಲಗೆಟ್ಟರಿಲ್ಲ| ಕುಪ್ಪಳಿಸಿದರಿಲ್ಲ|
ಬಲವ ತೋರಿದರಿಲ್ಲ| ಕೆಲಕೆ ಸಾರಿದರಿಲ್ಲ|
ತಲೆಯ ಕಲ್ಲಿಗೆ ಹಾಯ್ದು ಒಡಕೊಂಡರಿಲ್ಲ ||

ಧರಣಿಯಾಳುವ ದೊರೆಯ ಓಲೈಸಿದರಿಲ್ಲ |
ಉರಗನ ಬಿಲದೊಳಗೆ ಹೋದರು ಇಲ್ಲ|
ಗಿರಿಗಹ್ವರಂಗಳಲಿ ತೊಳಲಿ ಬಳಲಿದರಿಲ್ಲ |
ಬರಿದೆ ಹಲವರಿಗೆ ಬಾಯ್ದೆರೆದರಿಲ್ಲ||

ದೊಂಬಲಾಗವ ಹಾಕಿ ದಿಂಡು ತಿರುಗಿದರಿಲ್ಲ |
ತುಂಬಿರುವ ಊರೊಳಗೆ ತಿರಿತಿಂದರಿಲ್ಲ|
ಅಂಬುಜಾಕ್ಷ ಪುರಂದರವಿಠ್ಠಲನ್ನ |
ಪಾದಾಂಬುಜವ ನೆನೆನೆನೆದು ಸುಖಿಯಾಗು ಮನವೆ||

ರಚನೆ :ಶ್ರೀ ಪುರಂದರದಾಸರು

Leave a Reply

Your email address will not be published. Required fields are marked *

Translate »