ಸ್ನಾನದ ಸಂಕಲ್ಪ..!
(ಯಾವುದೇ ನದೀ ಮೊದಲಾದ ಜಲಾಶಯದಲ್ಲಿ ಸ್ನಾನಮಾಡುವಾಗ ಮೊದಲಿಗೆ ನದಿಗೆ, ಅಂತರ್ಯಾಮಿಯಾದ ಭಗವಂತನಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿ ‘ಮಹಾಪಾಪಿಷ್ಟನಾದ
ನಾನು ನಿನ್ನಲ್ಲಿ ಸ್ನಾನ ಮಾಡುತ್ತಿದ್ದೇನೆ. ನನ್ನ ಪಾಪಗಳನ್ನು ಪರಿಹರಿಸು. ನನ್ನ ಹೊಲಸು
ದೇಹದಿಂದ ನಿನ್ನನ್ನು ಸ್ಪರ್ಶಿಸುತ್ತಿರುವೆ. ನನ್ನನ್ನು ಕ್ಷಮಿಸು” ಎಂದು ಪ್ರಾರ್ಥಿಸಿ ನಂತರ ಜಲಾಶಯದಲ್ಲಿ ಇಳಿಯಬೇಕು. ನಂತರ ನದೀ ಪ್ರವಾಹಕ್ಕೆ ಅಭಿಮುಖವಾಗಿ ನಿಂತು (ನಿಂತ ನೀರಾಗಿದ್ದರೆ ಪೂರ್ವಾಭಿಮುಖವಾಗಿ) ಒಮ್ಮೆ ಸ್ನಾನ ಮಾಡಿ ನಂತರ ಪೂರ್ವಾಭಿಮುಖವಾಗಿ ಸಂಕಲ್ಪ ಮಾಡಬೇಕು.)
ಆಚಮ್ಯ, ಪಾಣಾನಾಯಮ್ಯ,ದೇಶಕಾಲೌ ಸಂಕೀರ್ತ್ಯ , ಏವಂ ಗುಣವಿಶೇಷಣವಿಶಿಷ್ಟಯಾಂ ಶುಭತಿತೌ ಆಸ್ಮದ್ ಗುರ್ವಂತರ್ಗತ – ಪರಮಗುರ್ವಾದಿಸಮಸ್ತಗುರ್ವಂತರ್ಗತ ಸಮಸ್ತನದ್ಯಭಿಮಾನಿ ಗಂಗಾದಿದೇವತಾಂತರ್ಗತ ಸಮಸ್ತತಾತ್ವಿಕದೇವತಾಂತರ್ಗತ – ಭಾರತೀರಮಣಮುಖ್ಯಪ್ರಾಣಾಂತರ್ಗತ ನಿರ್ದೋಷ, ಅನಂತಕಲ್ಯಾಣಗುಣಪೂರ್ಣ
ಸಮಸ್ತ -ಜಗದುತ್ಪತ್ತಿಸ್ಥಿತಿಲಯಕಾರಣೀಭೂತ ಕೂರ್ಮಾದಿ ಆನಂತಾವತಾರಾತ್ಮಕ ಸೀತಾಸಮೇತ ಶ್ರೀಮೂಲರಾಮದಿಗ್ವಿಜಯರಾಮವೇದವ್ಯಾಸಾತ್ಮಕ – ಭೈಷ್ಮೀಸತ್ಯಾಸವೇತಕೃಷ್ಣಾತ್ಮಕ – ಅನಿರುದ್ದಾದಿಚತುರ್ಮೂತ್ಯಾತ್ಮಕ – ಏತನ್ಮಾಸನಿಯಾಮಕಾಭಿಮಾನಿ –
ಬಿಂಬಮೂರ್ತಿಪ್ರೇರಣಯಾ ಬಿಂಬಮೂರ್ತಿ ಪ್ರೀತ್ಯರ್ಥಂ, ತಥಾ ಆನಂತಾನಂದನಿದಾನಭೂತಸ್ಯ, ಶ್ವೇತದ್ವೀಪೇಶ- ಮಾಯಾಪತಿವಾಸುದೇವ ಪರಮಪ್ರಸಾದಕಾರಣಿಭೂತಾಂ ಅತ್ತರ್ಥಾ೦ ಭಕ್ತಿಂ
ನಿಷ್ಪಾದಯಂತಿ ಭಗವದಪರೋಕ್ಷದರ್ಶನ-ನಿದಿಧ್ಯಾಸನ-ಮನನ-ಶ್ರವಣಾದೀನಿ ಸಂಪಾದಯಿತು, ಹರಿಸರ್ವೋತ್ತಮತ್ತತ್ವಾದಿ ಜ್ಞಾನ- ನಿರ್ನಿಮಿತ್ತನಿಶ್ಚಂಚಲಭಕ್ತಿ – ವಿಷಯವೈರಾಗ್ಯಸಂಪ್ರಾಪ್ತಯೇ, ಅಮಾನಿತ್ವ ಅದಂಭಿತ್ವಾದಿಜ್ಞಾನಸಾಧನಾನಾಂ, ಅಭಯಸತ್ವಸಂಶುಧ್ಯಾದಿದೈವಸಂಪದಾಂ ಚ ಅವಾಪ್ತಯೇ, ಮದ್ಯಪಾತಕ-ಉಪಪಾತಕ-ಮಹಾಪಾತಕಾನಾಂ ನಿರಾಸಾರ್ಥ೦, ಕಾಯಿಕ- ವಾಚಿಕ-ಮಾನಸಿಕ ಜ್ನಾತಾಜ್ನಾತದೋಷನಿಬರ್ಹಣದ್ವಾರಾ,ಶರೀರೇಂದ್ರಿ ಯಾಂತಃಕರಣಾನಾಂ
ಸಂಶೋಧನಾರ್ಥಂ,ಸದ್ಗೂರೂಪಸತ್ತಿಸಿದ್ದರ್ಥಂ –
ಬ್ರಹ್ಮಾಂಡಬಾಹ್ಯಸ್ಯ ಚಿಜ್ಜಲಸ್ಯ ತದಧಿಷ್ಠಾತು: ಮೂಲನಾರಾಯಣಸ್ಯ, ಅಂಡಾಂತರ್ವತಿರ ಗರ್ಭೋದಕಸ್ಯ ತದಧಿಷ್ಠಾತು: ವಿರಾಡಭಿನ್ನ ಪದ್ಮನಾಭಸ್ಯ ಕ್ಷೀರಸಾಗರಶಾಯಿ, ತನ್ಮಧ್ಯೆ ವಿರಾಜಮಾನ ಶ್ವೇತದ್ವೀಪಪತಿ ವಾಸುದೇವಸ್ಯ, ಸಮಸ್ತನದ್ಯಾಶ್ರಯನದ್ಯುತ್ಪತ್ತಿ ಕಾರಣೀಭೂತಚಿನ್ಮಯನಾಡ್ಯ ಭಿನ್ನಪರಮಪುರುಷಸ್ಯ, ಚಿದ್ರೂ ಪಸ್ಯ ಗಂಗಾನಾಮ್ನ: ಭಗವತಃ `ತತ್ರ
ಭಗವತಃ ಸಾಕ್ಷಾತ್ ಯಜ್ನಲಿಂಗಸ್ಯ ಎಷ್ಟೋ ವಿಕ್ರಮತಃ ವಾಮಪಾದಾಂಗುಷ್ಟ ನಖ – ನಿರ್ಭಿನ್ನ – ಉರ್ಧ್ಯಾಂಡ ಕಟಾಹ – ವಿವರೇಣ – ಅಂತಃಪ್ರವಿಷ್ಟಾಯಾ ಬಾಹ್ಯ ಜಲಧಾರಾ ತಚ್ಚರಣ – ಪಂಕಜಾವನೇಜನ – ಅರುಣಕಿಂಜಲ್ಕೋಪರಂಜಿತ – ಅಖಿಲಜಗದಘ – ಮಲಾಪಹೊಪಸ್ಪರ್ಶನಾ ಅಮಲಾ ಸಾಕ್ಷಾತ್ ಭಗವತ್ಪದೀ ಇತ್ಯನುಪಲಕ್ಷಿತವಚೋಭೀ ಅಭಿಧೀಯಮಾನಾಯಾಃ, ವಿಷ್ಣುಪಾದಾಬ್ದಸಂಭೂತಾಯಾಃ ಗಂಗಾಯಾಃ ತದಂತರ್ಗತ
ಮಾಧವಸ್ಯ, ಗೋದಾವರ್ಯಾ: ಶದಂತರ್ಗತ ವೀರನಾರಾಯಣಸ್ಯ, ಕೃಷ್ಣವೇಣ್ಯಾ ಜನಾರ್ದನಸ್ಯ
ಸರಸ್ವತ್ಯಾ: ಪದ್ಮನಾಭಸ್ಯ, ಕಾವೇರ್ಯಾ : ರಂಗನಾಥಸ್ಯ, ಸರಯ್ಯಾ’ ರಾಮಸ್ಯೆ, ತುಂಗಭದ್ರಾಯಾ ವರಾಹಸ್ಯ, ಯಮುನಾಯಾ: ಕೃಷ್ಣಸ್ಯ, ನರ್ಮದಾಯಾ: ವಿಷ್ಟೋ, ಸಿಂಧ್ವಾ:
ಕ್ಷೀರಾಭ್ಧಿಶಾಯಿನಃ, ಭವನಾಶಿನ್ಯಾ: ನೃಸಿಂಹಸ್ಯ, ಕುಮುದ್ವತ್ಯಾ: ತ್ರಿವಿಕ್ರಮಸ್ಯ, ಮಂಜುಲಾಯಾಃ ಹಯಗ್ರೀವಸ್ಯ, ಭೀಮರಥ್ಯಾ: ಶ್ರೀಧರಸ್ಯ, ತಾಮ್ರಪರ್ಣಾ: ಅನಂತಸ್ಯ, ಮಲಾಪಹಾರ್ಯಾ: ಜನಾರ್ದನಸ್ಯ, ಪಿನಾಕಿನ್ಯಾ: ಕೇಶವಸ್ಯ, ಏವಂ ಅಲಕನಂದಾ – ನೇತ್ರಾವತೀ – ಕುಮಾರಧಾರಾ – ಪಯಸ್ವಿನೀ – ಸುವರ್ಣಾ – ವರದಾ – ಧರ್ಮಗಂಗಾ -ತಾಪಾ – ಶಾಲ್ಮಲೀ-ಬಾಣಗಂಗಾ – ಗೋಮತಿ: – ತ್ರಿವೇಣಿ – ಫಲ್ಗು- ಗಂಗಾಯಮುನಾಸರಸ್ವತೀಸಂಗಮ – ಗಂಗಾಸಾಗರಸಂಗಮ – ನಿವೃತ್ತಿಸಂಗಮ –
ಸ್ವರ್ಣಮುಖಿ – ನೃಪತುಂಗಾ – ಧನುಷೋಟಿ – ಘೃತಧಾರಾ – ತುಂಗಾ – ಭದ್ರಾ – ಘಟಪ್ರಭಾ – ಮಲಪ್ರಭಾ – ಸಿಂಧು – ಬ್ರಹ್ಮಪುತ್ರ – ಗಂಡಕೀ ವಿನತಾ – ಕಪಿಲಾ – ಸೀತಾ ” ಅಘನಾಶಿನೀ – ಶರಾವತೀ – ಕಾಗಿಣಿ ಇತ್ಯಾದಿನದೀನಾಂ ತದಂತರ್ಗತ ದತ್ತಾತ್ರೆಯಾದಿರೂಪಾಣಾಮ್,
ಮಧ್ವಸರೋವರಸ್ಯ ತದಂತರ್ಗತ ಶ್ರೀಕೃಷ್ಣಸ್ಯ, ಸ್ವಾಮಿಪುಷ್ಕರಿಣ್ಯಾ: ತದಂತರ್ಗತ ಭೂಸಹಿತ
ಅಧೋಕ್ಷಜಸ್ಯ ಶ್ರೀ ಶ್ರೀನಿವಾಸಸ್ಯ, ಚಂದ್ರ ಪುಷ್ಕರಿಣ್ಯಾಃ ತದಂತರ್ಗತ ವಾಮನಸ್ಯ, ಮಾನಸಸರೋವರ, ತದಂತರ್ಗತ ಮಧುಸೂದನಸ್ಯ ಬಿಂದುಸರೋವರಸ್ಯ ತದಂತರ್ಗತ ಕಪಿಲಸ್ಯ, ಪರಶುತೀರ್ಥ – ಬಾಣತೀರ್ಥ ಗದಾತೀರ್ಥ – ಧನುಷ್ತೀರ್ಥ – ವಾಸುದೇವತೀರ್ಥ – ದಂಡತೀರ್ಥ – ಹಂಪಿಚಕ್ರತೀರ್ಥ – ನೈಮಿಷಾರಣ್ಯಸ್ಥಚಕ್ರ ತೀರ್ಥ – ವಿಶ್ರಾ೦ತಿತೀರ್ಥ – ಪುಷ್ಕರತೀರ್ಥ – ತುಂಬುರುತೀರ್ಥ – ವಾಮನತೀರ್ಥ – ಕಪಿಲತೀರ್ಥ – ಪದ್ಮತೀರ್ಥ – ಚಂದ್ರ ತೀರ್ಥ – ಧವಲಗಂಗಾ – ಪಾಪವಿನಾಶಿನೀತೀರ್ಥ – ನರಸಿಂಹತೀರ್ಥ- ಇತ್ಯಾದಿಸಮಸ್ತಸರೋವರಾಣಾಂ ತದಂತರ್ಗತಕೇಶವಾದೀನಾಮ್,
ದೇವತಾನಾಂ ತದಂತರ್ಗತ ಗದಾಧರಸ್ಯ, ಕ್ಷುದ್ರಾಪಗಾನಾಂ ತದಂತರ್ಗತ ಲಕ್ಷ್ಮೀ ನಾರಾಯಣಸ್ಯೆ, ತಟಾಕಾನಾಂ ತದಂತರ್ಗತ ಶೇಷಶಾಯಚ್ಯುತಸ್ಯ ವಾಪೀನಾಂ ತದಂತರ್ಗತ ಚಕ್ರಪಾಣಿಮಹಾವಿಭೂಃ, ಕ್ಷೀರಸಾಗರಾದಿಸಪ್ತಸಾಗರಾಣಾಂ,
ತಥಾ ಸಾರ್ಧ ಕೋಟಿತೀರ್ಥಾನಾಂ ತದಭಿಮಾನಿದೇವತಾನಾಂ, ಬುಧವರುಣಾಂತರ್ಗತ ಭಾರತೀರಮಣಮುಖ್ಯ
ಪ್ರಾಣಾಂತರ್ಗತ ಮತ್ಸ್ಯತ್ರಿವಿಕ್ರಮನಾರಾಯಣಾದಿ ರೂಪಾಣಾಂ ಸ್ಮರಣಪೂರ್ವಕಂ ತಾನಿ ತೀರ್ಥಾನಿ ತದಭಿಮಾನಿದೇವತಾಶ್ವ ತನ್ನಿಯಾಮಕ ಭಗವದ್ರೂಪಾಣಿ ಆಸ್ಮಿನ್ ಜಲಾಶಯೇ (ಜಲೇ) ಆವಾಹಯಿಷ್ಯ. ತತಃ ತತ್ಸನ್ನಿಧಾನೋಪೇತೇ ಆಸ್ಮಿನ್ ಜಲಾಶಯೇ ಸ್ನಾನಂ ಚ
ಕರಿಷ್ಯ..
ಎಂದು ಸಂಕಲ್ಪಮಾಡಿ – (ಪಕ್ಕದಲ್ಲಿ ಬ್ರಾಹ್ಮಣರಿದ್ದರೆ ಅವರಿಂದ ಸ್ನಾನಕ್ಕಾಗಿ ಅನುಜ್ಞೆಯನ್ನು ಪಡೆಯಬೇಕು)
ಚತುರ್ಭುಜನಾದ ವಾಸುದೇವ ನಮ್ಮ ತಲೆಯ ಮೇಲೆ ನಿಂತಿರುವನೆಂದು ಭಕ್ತಿಯಿಂದ ಸ್ಮರಿಸಬೇಕು. ಆತನ ಪಾವನ ಪಾದಗಳಿಂದ ಹರಿದ ಪಾದಜಲವು, ನಮ್ಮ ಒಳಹೊಕ್ಕು ಇಡಾ-ಪಿಂಗಳಾ-ಸುಷುಮ್ಮಾ ನಾಡಿಗಳಲ್ಲಿ ತುಂಬಿದೆ ಎಂದು ಭಾವಿಸಬೇಕು. ಈ ಪಾದತೀರ್ಥವೇ ಮನ- ಇಂದ್ರಿಯಗಳ ಮಾಲಿನ್ಯವನ್ನು, ಹೊರಗಿನ ಮೈಲಿಗೆಯನ್ನು ತೊಳೆಯುವದು.
ಮೂರುವರೆ ಕೋಟಿತೀರ್ಥಕ್ಕಿಂತಲೂ ಮಿಗಿಲಾಗಿ ಪವಿತ್ರವಾದುದು ಈ ಪಾದತೀರ್ಥ ಎಂದು ಚಿಂತಿಸುತ್ತಾ ಸ್ನಾನವನ್ನು ಮಾಡಬೇಕು.
ಯೋಸೊ ಸರ್ವಗತೋ ದೇವಃ ಚಿತ್ಸ್ವರೂಪೋ ನಿರಂಜನಃ | ಸ ಏವ ದ್ರವ ರೂಪೇಣ ಗಂಗಾಂಭೋ ನಾತ್ರ ಸಂಶಯ
ನಂದಿನೀ ನಲಿನೀ ಸೀತಾ ಮಾಲತೀ ಚ ಮಲಾಪಹಾ | ವಿಷ್ಣುಪಾದಾಬ್ದಸಂಭೂತಾ ಗಂಗಾ ತ್ರಿಪಥಗಾಮಿನಿ:11
ಭಾಗೀರಥೀ ಭೋಗವತೀ ಜಾಹ್ನವೀ ತ್ರಿದತೇಶ್ವರೀ | ದ್ವಾದಶೈತಾನಿ ನಾಮಾನಿ ಯತ್ರ ಯತ್ರ ಜಲಾಶಯೇ ||
ಸ್ನಾನಕಾಲೇ ಪಠೇನ್ನಿತ್ಯಂ ತತ್ರ ತತ್ರ ವಸಾಮ್ಯಹಮ್ ||
ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ | ಮುಚ್ಯತೆ ಸರ್ವಪಾಪೇಭ್ಯಃ ವಿಷ್ಣುಲೋಕಂ ಸಗಚ್ಛತಿ ।।
ಗಂಗಾ ಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ ಕೃಷ್ಣಾ ಭೀಮರಥಿ ಚ ಫಲ್ಘು ಸರಯೂ ಶ್ರೀಗಂಡಕೀ ಗೊಮತಿ | ಕಾವೇರೀ ಕಪಿಲಾ ಪ್ರಯಾಗ ವಿನತಾ ನೇತ್ರಾವತೀತ್ಯಾದಯೊ ನದ್ಯ: ಶ್ರೀ ಹರಿಪಾದಪಂಕಜಭವಾ ಕುರ್ವಂತು ನೋ ಮಂಗಲಮ್ ||
*ಪ್ರಯಾಗ ಪ್ರಯಾಗಃ ಪ್ರಯಾಗಃ
ಈ ಮಂತ್ರಗಳನ್ನು ಹೇಳುತ್ತಾ ಸ್ನಾನ ಮಾಡಬೇಕು.
ನಂತರ
‘ಮೃತ್ತಿಕೆ: ಹನ ಮೇ ಪಾಪಂ ಯನ್ಮಯಾ ದುಷ್ಕತಂ ಕೃತಂ’
ಎಂಬ ಮಂತ್ರದಿಂದ : ಮೃತ್ತಿಕೆಯನ್ನು ಲೇಪಿಸಿಕೊಂಡು ಸ್ನಾನಮಾಡಬೇಕು.
ಸ್ನಾನಮಾಡುವಾಗ ಜಲಾಶಯದಲ್ಲಿ ಪುರುಷಸೂಕ್ತವನ್ನು ಹೇಳಿಕೊಂಡು ಎಲ್ಲ ನದಿ-ತೀರ್ಥ-ಸರೋವರ-ಸಾಗರ ಮೊದಲಾದ ಸಮಸ್ತಜಲರಾಶಿಗಳು ಭಗವಂತನ ನಾಡಿಗಳಿಂದ ಜನಿಸಿವೆ, ಅವನ ನಾಡಿಗಳನ್ನೇ ಆಶ್ರಯಿಸಿ
ಇವೆ ಎಂದು ಚಿಂತಿಸುತ್ತಾ ನಮ್ಮ ಹೃದಯದಲ್ಲಿರುವ ಬಿಂಬಮೂರ್ತಿ ನಾರಾಯಣನಿಗೆ ಅಭಿಷೇಕ ಎಂಬ ಅನುಸಂಧಾನ ಪೂರ್ವಕವಾಗಿ ಸ್ನಾನವನ್ನು ಮಾಡಬೇಕು . ಗಾಯತ್ರಿ ವಿಷ್ಣು ಮೊದಲಾದ ಮಂತ್ರಗಳಿಂದ ಪ್ರೋಕ್ಷಣೆಯನ್ನು ಮಾಡಿಕೊಳ್ಳಬೇಕು.
ಸ್ನಾನಾನಂತರದಲ್ಲಿ ಅರ್ಘವನ್ನು ನೀಡಬೇಕು.
ಅರ್ತ್ಯಮಂತ್ರ –
ನಮಃ ಕಮಲನಾಭಾಯ ನಮಸ್ತೆ ಜಲಶಾಯಿನೆ ನಮಸ್ತೇಸ್ತು ಹೃಷಿಕೇಶ ಗ್ರಹಾಣಾರ್ಘ್ಯಂ ನಮೋಸ್ತುತೇ॥ (ವಿಷ್ಣು)
ಏಹಿ ಸೂರ್ಯ ಸಹಸ್ರಾಂಶೋ ತೇಜೋರಾಶೀ ಜಗತ್ಪತೇ। ಅನುಕಂಪಯ ಮಾಂ ಭಕ್ತ್ಯಾ ಗೃಹಾರ್ಣಾಂ ನಮೋಸ್ತುತೇ || (ಸೂರ್ಯ)
ಬ್ರಹ್ಮದಂಡಸಮುದ್ಭೂತೇ ಪೂರ್ಣಚಂದ್ರನಿಭಾನನೇ ತ್ರೈಲೋಕ್ಯವಂದಿತ ಗಂಗೇ ಗೃಹಾಣಾರ್ಥ್ಯಂ ನಮೋಸ್ತುತೇ ॥ (ಗಂಗಾ)
ವಿಶೇಷವಾಗಿ ಆಯಾ (ಕಾರ್ತಿಕಾದಿ) ಮಾಸಗಳಲ್ಲಿ ಹೇಳಿದ ಅರ್ಥ್ಯವನ್ನು ಕೊಡಬೇಕು.
ಅವಗಾಹನಸ್ನಾನದಲ್ಲಿ ವಿಶೇಷ.
ದೇವತರ್ಪಣ –
ಬ್ರಹ್ಮಾದಯೋ ಯೇ ದೇವಾಃ ತಾನ್ ದೇವಾನ್ ತರ್ಪಯಾಮಿ ಭೂಃ ದೇವಾನ್…….
ಭುವ:ದೇವಾನ್…. ಭೂರ್ಭುವಸ್ವರ್ದೇವಾನ್ ತರ್ಪಯಾಮಿ |
ಋಷಿತರ್ಪಣ –
ಕೃಷ್ಣದ್ವೈಪಾಯನಾದಯೋ ಯೇ ಋಷಯಃ ತಾನ್ ಋಷಿನ್ ತರ್ಪಯಾಮಿ, ಭೂ: ಋಷೀನ್… ಭುವಃ ಋಷೀನ್….: ಸ್ವಋಷೀನ್…. ಭೂರ್ಭುವಸ್ಸು:ಋಷಿನ್ ತರ್ಪಯಾಮಿ
ಪಿತೃತರ್ಪಣ –
ಕವ್ಯವಾಹನಾದಯೋ ಯೇ ಪಿತರಃ ತಾನ್ ಪಿತೃನ್ ತರ್ಪಯಾಮಿ . ಭೂಃ ಪಿತೃನ್ … ಭುವಃ ಪಿತೃನ್… ಸ್ವಃ ಪಿತೃನ್….. ಭೂರ್ಭುವಸ್ವಃ ಪಿತೃನ್ ತರ್ಪಯಾಮಿ।
ಯಕ್ಷತರ್ಪಣ –
ಯನ್ಮಯಾ ದೂಷಿತಂ ತೋಯಂ ಶಾರೀರಮಲಸಂಭವಾತ್ ತದ್ದೋಷಪರಿಹಾರಾರ್ಥಂ ಯಕ್ಷಾಣಂ ತರ್ಪಯಾಮ್ಯಹಮ್ ||
ಎಂದು ಅರ್ಘ ಕೊಟ್ಟು
ಅನೇನ ಸ್ನಾನಕರ್ಮಣಾ ಅಸ್ಮದ್ಗುರ್ವಂತರ್ಗತ ತತ್ವಾಭಿಮಾನಿದೇವತಾಂತರ್ಗತ
ಶ್ರೀಮದ್ಭಾರತೀರಮಣ ಮುಖ್ಯಪ್ರಾಣಾಂತರ್ಗತ ಮತ್ತ್ಸ್ಯ ತ್ರಿವಿಕ್ರಮನಾರಾಯಣಾದ್ಯಭಿನ್ನ
ಬಿಂಬಮೂರ್ತಿ: ಶ್ರೀನಾರಾಯಣ: ಪ್ರಿಯತಾಮ್ ಪ್ರೀತೋ ವರದೋ ಭವತು
ಶ್ರೀಕೃಷ್ಣಾರ್ಪಣಮಸ್ತು