ದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ

ಪಾವನ ಚರಿತ ಸಂಜೀವನ ಗಿರಿಧರ
ಪಾವಮಾಣಿ ಕರುಣಾವಲೋಕನದಿ
ನೀ ಒಲಿಯುತಲಿ ಸದಾವಕಾಲ ತವ
ತಾವರೆ ಪದಯುಗ ಸೇವೆಯ‌ ಕರುಣಿಸು

ದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ||2||
ಕಾವೋದು ಭಾವಿ ಪರಮೇಷ್ಠಿ||2||
||ದೇವಾ||

ವಾನರ ಕುಲನಾಯಕ ಜಾನಕಿ ಶೋಕ
ಕಾನನ ತ್ರಣ ಪಾವಕಾ…ಆ…
ಹೀನ ಕೌರವ ನಾಶಕ
ಸನ್ಮೌನಿ ತಿಲಕ ,ಆನಂದ ತೀರ್ಥನಾಮಕಾ…
ಕ್ಷೋಣಿಯೊಳಗೆ ಎಣೆ ಕಾಣೆ ,ನಿನಗೆ ಎನ್ನ
ಮಾನದೆ ಅನುದಿನ ಪಾಣಿ ಪಿಡಿದು ಪೊರೆ
ಸ್ತಾನು ಜನಕ ಗೀರ್ವಾಣ ವಿನುತ
ಜಗತ್ ಪ್ರಾಣ ರಮಣ ಕಲ್ಯಾಣಮೂರುತಿ
||ದೇವಾ||

ಮರುತ ನಂದನ ಹನುಮ ಪುರಹರ ರೋಮ
ಪರಮ ಪುರುಷ ಶ್ರೀಭೀಮಾ
ಕರುಣಾಸಾಗರ ಜಿತ ಕಾಮ ,ಸದ್ಗುಣ ಭೌಮ
ಪರವಾದಿ ಮತವ ನಿರ್ನಾಮಾ…
ಗಿರಿಸುತ ಪಾಲಕ ,ಝರಿಜ ವಿನಾಶಕ
ಹರಿಮತ ಸ್ಥಾಪಕ,ದುರಿತ ವಿಮೋಚಕ
ಶರಣು ಜನರ ಸುರ, ತರು ಭಾರತಿ ವರ
ಮರೆಯದೆ ಪಾಲಿಸು ನಿರುಪಮ ಚರಿತ
||ದೇವಾ||

ದಿಟ್ಟ ಶ್ರೀ ಶ್ಯಾಮಸುಂದರ
ವಿಠ್ಠಲ ಕುವರ ,ದುಷ್ಟ‌ ರಾವಣ ಮದಹರಾ…
ಜಿಷ್ಣು ಪೂರ್ವಜ ವ್ರಿಕೋದರಾ
ರಣರಂಗ ಶೂರ ಶಿಷ್ಠ ಜನರ ಉಧ್ಧಾರಾ..
ನಿಷ್ಠೆಯಿಂದಲಿ ಮನ ಮುಟ್ಟಿ ನಿನ್ನಪದ
ತಠ್ಠನೆ ಪಾಡುವ ಶ್ರೇಷ್ಟ‌ ಸುಜನರೊಳು
ಇಟ್ಟು ಸಲಹೊ ಸದಾ ಸ್ರಷ್ಟಿ ಮಂಡಲದಿ
ಪುಟ್ಟ ಗ್ರಾಮ ಬಲ್ಲಟಗಿಯ ವಾಸ
‌‌‌‌‌‌ ||ದೇವಾ||

Leave a Reply

Your email address will not be published. Required fields are marked *

Translate »