ದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ

ಪಾವನ ಚರಿತ ಸಂಜೀವನ ಗಿರಿಧರ
ಪಾವಮಾಣಿ ಕರುಣಾವಲೋಕನದಿ
ನೀ ಒಲಿಯುತಲಿ ಸದಾವಕಾಲ ತವ
ತಾವರೆ ಪದಯುಗ ಸೇವೆಯ‌ ಕರುಣಿಸು

ದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ||2||
ಕಾವೋದು ಭಾವಿ ಪರಮೇಷ್ಠಿ||2||
||ದೇವಾ||

ವಾನರ ಕುಲನಾಯಕ ಜಾನಕಿ ಶೋಕ
ಕಾನನ ತ್ರಣ ಪಾವಕಾ…ಆ…
ಹೀನ ಕೌರವ ನಾಶಕ
ಸನ್ಮೌನಿ ತಿಲಕ ,ಆನಂದ ತೀರ್ಥನಾಮಕಾ…
ಕ್ಷೋಣಿಯೊಳಗೆ ಎಣೆ ಕಾಣೆ ,ನಿನಗೆ ಎನ್ನ
ಮಾನದೆ ಅನುದಿನ ಪಾಣಿ ಪಿಡಿದು ಪೊರೆ
ಸ್ತಾನು ಜನಕ ಗೀರ್ವಾಣ ವಿನುತ
ಜಗತ್ ಪ್ರಾಣ ರಮಣ ಕಲ್ಯಾಣಮೂರುತಿ
||ದೇವಾ||

ಮರುತ ನಂದನ ಹನುಮ ಪುರಹರ ರೋಮ
ಪರಮ ಪುರುಷ ಶ್ರೀಭೀಮಾ
ಕರುಣಾಸಾಗರ ಜಿತ ಕಾಮ ,ಸದ್ಗುಣ ಭೌಮ
ಪರವಾದಿ ಮತವ ನಿರ್ನಾಮಾ…
ಗಿರಿಸುತ ಪಾಲಕ ,ಝರಿಜ ವಿನಾಶಕ
ಹರಿಮತ ಸ್ಥಾಪಕ,ದುರಿತ ವಿಮೋಚಕ
ಶರಣು ಜನರ ಸುರ, ತರು ಭಾರತಿ ವರ
ಮರೆಯದೆ ಪಾಲಿಸು ನಿರುಪಮ ಚರಿತ
||ದೇವಾ||

ದಿಟ್ಟ ಶ್ರೀ ಶ್ಯಾಮಸುಂದರ
ವಿಠ್ಠಲ ಕುವರ ,ದುಷ್ಟ‌ ರಾವಣ ಮದಹರಾ…
ಜಿಷ್ಣು ಪೂರ್ವಜ ವ್ರಿಕೋದರಾ
ರಣರಂಗ ಶೂರ ಶಿಷ್ಠ ಜನರ ಉಧ್ಧಾರಾ..
ನಿಷ್ಠೆಯಿಂದಲಿ ಮನ ಮುಟ್ಟಿ ನಿನ್ನಪದ
ತಠ್ಠನೆ ಪಾಡುವ ಶ್ರೇಷ್ಟ‌ ಸುಜನರೊಳು
ಇಟ್ಟು ಸಲಹೊ ಸದಾ ಸ್ರಷ್ಟಿ ಮಂಡಲದಿ
ಪುಟ್ಟ ಗ್ರಾಮ ಬಲ್ಲಟಗಿಯ ವಾಸ
‌‌‌‌‌‌ ||ದೇವಾ||

4 thoughts on “ದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ

  1. ಸಾಲದಿಂದ ಮುಕ್ತಿ ಪಡೆಯಲು ಈ ಸ್ತೋತ್ರಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳಲು ಇದು ಉತ್ತಮ ಮಾಹಿತಿ. ಹನುಮಂತ ಮತ್ತು ರಾಘವೇಂದ್ರರ ಸ್ತೋತ್ರಗಳು ಬಹಳ ಶಕ್ತಿಯುತವಾಗಿವೆ. ಜೀವನದ ಕಷ್ಟಗಳನ್ನು ದೂರ ಮಾಡಲು ಮತ್ತು ಶಾಂತಿ ಕಂಡುಕೊಳ್ಳಲು ಇದು ಮಹತ್ವದ ಪಠ್ಯ. ಜಪ ಮತ್ತು ಧ್ಯಾನದ ಮೂಲಕ ಧೈರ್ಯ ಮತ್ತು ಸ್ಥಿರತೆ ಬೆಳೆಯಲು ಇದು ಸಹಾಯ ಮಾಡುತ್ತದೆ. ಈ ಸ್ತೋತ್ರಗಳನ್ನು ನಿಯಮಿತವಾಗಿ ಪಠಿಸಿದರೆ ಏನು ಫಲಿತಾಂಶಗಳು ಕಾಣಬಹುದು?

  2. ಸಾಲದಿಂದ ಮುಕ್ತಿ ಪಡೆಯಲು ಇದೊಂದು ಉತ್ತಮ ಮಾರ್ಗವಾಗಿದೆ. ಹನುಮಾನ್ ಮತ್ತು ರಾಮನ ಭಕ್ತಿಯಿಂದ ಸಾಲದ ಬಾಧೆಯನ್ನು ದೂರ ಮಾಡಬಹುದು. ಈ ಸ್ತೋತ್ರವನ್ನು ಪಠಿಸುವುದರ ಮೂಲಕ ಮನಸ್ಸಿನಲ್ಲಿ ಶಾಂತಿ ಮತ್ತು ಶಕ್ತಿಯನ್ನು ಪಡೆಯಬಹುದು. ಶ್ರೀ ರಾಘವೇಂದ್ರ ಮತ್ತು ಗಣೇಶನ ಕೃಪೆಯಿಂದ ಸಕಲ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಸ್ತೋತ್ರವನ್ನು ಪಠಿಸುವುದರಿಂದ ಸಾಲದಿಂದ ಮುಕ್ತಿ ಪಡೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

  3. ಸಾಲದ ಬಾಧೆಯಿಂದ ಮುಕ್ತಿ ಪಡೆಯಲು ಈ ಸ್ತೋತ್ರ ಮತ್ತು ಮಂತ್ರಗಳು ಹೇಗೆ ಸಹಾಯ ಮಾಡುತ್ತವೆ ಎಂಬುದು ಒಳ್ಳೆಯ ವಿಷಯ. ಈ ಪಠನದಿಂದ ಜನರು ತಮ್ಮ ಮನಸ್ಸಿನಲ್ಲಿ ಶಾಂತಿ ಮತ್ತು ಭಕ್ತಿ ಕಂಡುಕೊಳ್ಳಬಹುದು. ಹನುಮಾನ್ ಮತ್ತು ರಾಮನ ಭಕ್ತಿಯ ಮೂಲಕ ಸಾಲದಿಂದ ಮುಕ್ತಿ ಪಡೆಯುವುದು ಒಂದು ಆಧ್ಯಾತ್ಮಿಕ ಮಾರ್ಗವಾಗಿದೆ. ರಥವನೇರಿದ ರಾಘವೇಂದ್ರನ ಸ್ತುತಿಯಿಂದ ಮನಸ್ಸು ಶುದ್ಧವಾಗುತ್ತದೆ. ಇದರ ಮೂಲಕ ಸಾಲದಿಂದ ಮುಕ್ತಿ ಪಡೆಯುವುದು ತಾನೇ ಆಗುತ್ತದೆಯೇ?

  4. ಸಾಲದಿಂದ ಮುಕ್ತಿ ಪಡೆಯಲು ಈ ಸ್ತೋತ್ರವನ್ನು ಪಠಿಸುವುದು ಅತ್ಯಂತ ಉಪಯುಕ್ತವಾಗಿದೆ. ಹನುಮಂತನನ್ನು ಸ್ಮರಿಸುವುದರಿಂದ ಮಾನಸಿಕ ಶಾಂತಿ ಮತ್ತು ಬಲ ದೊರಕುತ್ತದೆ. ರಾಮನ ಭಜನೆಯಿಂದ ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚುತ್ತದೆ. ಸಾಲದ ಬಾಧೆಯಿಂದ ಮುಕ್ತಿ ಪಡೆಯಲು ಇದು ಒಳ್ಳೆಯ ಮಾರ್ಗವಾಗಿದೆ. ಈ ಸ್ತೋತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಯಾವ ರೀತಿಯ ಪರಿಣಾಮಗಳು ಕಂಡುಬರುತ್ತವೆ?

Leave a Reply to Накрутка авито Cancel reply

Your email address will not be published. Required fields are marked *

Translate »